ಬಳ್ಳಾರಿ: 500, 1 ಸಾವಿರ ರೂ. ನೋಟು ನಿಷೇಧವಾಗಿ ಒಂದು ವರ್ಷ ಕಳೆದ್ರೂ ಮತ್ತೆ ಮತ್ತೆ ಹಳೆಯ ನೋಟುಗಳು ಪತ್ತೆಯಾಗುತ್ತಲೇ ಇವೆ.
ಚಲಾವಣೆಗೆ ಬಾರದ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ದೇವಸ್ಥಾನದ ಹುಂಡಿಗೆ ಹಾಕಿ ಭಕ್ತರು ಕಾಣಿಕೆ ಒಪ್ಪಿಸಿದ್ದಾರೆ. ಐತಿಹಾಸಿಕ ಪ್ರಸಿದ್ಧ ದೇವಸ್ಥಾನ ಹಂಪಿಯ ವಿರೂಪಕ್ಷೇಶ್ವರ ದೇವಾಲಯದ ಗರ್ಭಗುಡಿಯ ಹುಂಡಿ ಎಣಿಕೆ ಕಾರ್ಯ ವೇಳೆಯಲ್ಲಿ ಸುಮಾರು 18 ಸಾವಿರ ರೂ. ಮೌಲ್ಯದ ನಿಷೇಧಿತ ನೋಟು ಪತ್ತೆಯಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Advertisement
Advertisement
ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುವುದರಿಂದ ಕೆನಡಾ, ಕೊರಿಯಾ ದೇಶದ ವಿವಿಧ ಕರೆನ್ಸಿ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ದೇವರಿಗೆ ತಮ್ಮನ್ನು ಪರೀಕ್ಷೆಯಲ್ಲಿ ಪಾಸು ಮಾಡುವ ಕುರಿತು ಮನವಿ ಪತ್ರವನ್ನು ಕೂಡ ಹುಂಡಿಯೊಳಗೆ ಹಾಕಿದ್ದಾರೆ.
Advertisement
ಈ ಬಾರಿ ಕಾಣಿಕೆ ಹುಂಡಿಯಲ್ಲಿ 18 ಲಕ್ಷ ರೂ. ನಗದು ಸಂಗ್ರಹಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.