ಬೆಂಗಳೂರು: ಬಿಜೆಪಿ, ಕಾಂಗ್ರೆಸ್ ಕ್ರಾಂತಿಯ ನಡೆಗೆ ಜೆಡಿಎಸ್ ಶಾಂತಿಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ರಾಷ್ಟ್ರೀಯ ಪಕ್ಷಗಳು ವೈಲೆಂಟ್ ಆದರೆ ನಾವು ಸೈಲೆಂಟ್ ಪಾಲಿಟಿಕ್ಸ್ ಮಾಡೋಣ. ಬಿಜೆಪಿ-ಕಾಂಗ್ರೆಸ್‍ನ ಧರ್ಮ, ಜಾತಿ, ವ್ಯಕ್ತಿ ಗುದ್ದಾಟಕ್ಕೆ ಶಾಂತಿ ಮಂತ್ರದ ಮೂಲಕ ದಳಪತಿಗಳು ಟಕ್ಕರ್ ಕೊಡಲು ಮುಂದಾಗಿದ್ದಾರೆ.
ಮಡಿಕೇರಿ ಚಲೋ, ಸಾವರ್ಕರ್ ವಿಷಯ, ಮಾಂಸ ದಂಗಲ್, ಮುಸ್ಲಿಂ ಏರಿಯಾ ಎಲ್ಲಾ ವಿಷಯದಲ್ಲೂ ಮೌನ ಕಾಯ್ದುಕೊಳ್ಳಲಾಗಿದೆ. ಹಳೆ ಮೈಸೂರು ಭಾಗದಲ್ಲಿ ರಾಷ್ಟ್ರೀಯ ಪಕ್ಷಗಳ ಅಬ್ಬರಕ್ಕೆ ಶಾಂತಿ ನಡಿಗೆ ಮೂಲಕ ಬ್ರೇಕ್ ಹಾಕಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ.
ಜೆಡಿಎಸ್ ಪ್ಲ್ಯಾನ್ ಏನು?
ಬಿಜೆಪಿ-ಕಾಂಗ್ರೆಸ್ ವಿವಾದ ಎಬ್ಬಿಸುವ ಭಾಗಗಳಲ್ಲಿ ಶಾಂತಿ ಸಭೆ, ಸೌಹಾರ್ದ ನಡಿಗೆ ಮಾಡಿ ರಾಷ್ಟ್ರೀಯ ಪಕ್ಷಗಳ ಜಾತಿ, ಧರ್ಮ ದಂಗಲ್ ಬಗ್ಗೆ ಪ್ರತಿ ಜಿಲ್ಲೆಗಳಲ್ಲಿ ಜನ ಜಾಗೃತಿ ಮಾಡಲು ಮುಂದಾಗಿದೆ. ಇದನ್ನೂ ಓದಿ: ಪಾಕ್ ಮೇಲೆ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ – ವಾಯುಪಡೆಯ ಮೂವರು ಅಧಿಕಾರಿಗಳು ವಜಾ
ತನ್ನ ಭದ್ರಕೋಟೆ ಆಗಿರುವ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಒತ್ತು ಕೊಡಲು ಖುದ್ದು ಕುಮಾರಸ್ವಾಮಿ, ಕಾರ್ಯಕರ್ತರು ಅಖಾಡಕ್ಕಿಳಿದು ಜಾಗೃತಿ ಮಾಡಲು ಸಿದ್ಧತೆ ನಡೆಸಿದ್ದಾರೆ.
ಶಾಂತಿ ನಡಿಗೆ ಮೂಲಕ ಕೈ-ಕಮಲ ಅಶಾಂತಿ ಸೃಷ್ಟಿ ಮಾಡುತ್ತಿವೆ ಎಂಬ ಸಂದೇಶ ರವಾನಿಸಬೇಕು. ಘಟನೆ ನಡೆದ ಕೂಡಲೇ ಪಕ್ಷದ ನಾಯಕರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಜಾಗೃತಿ ಮೂಡಿಸಬೇಕು. ಬಿಜೆಪಿ-ಕಾಂಗ್ರೆಸ್ ಕ್ರಾಂತಿ ನಡೆಗೆ ಶಾಂತಿ ನಡಿಗೆ ಮೂಲಕ ಜನರ ವಿಶ್ವಾಸಗಳಿಸಿ 2 ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪರ್ಯಾಯ ಎಂಬ ಸಂದೇಶ ರವಾನಿಸಲು ಮುಂದಾಗಿದೆ.