Connect with us

Latest

ಯಾರೋ ಎಸೆದ ಚಪಾತಿಯನ್ನು ನೀರಿನಲ್ಲಿ ತೊಳೆದು ತಿಂದ ವೃದ್ಧ

Published

on

– ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ವೃದ್ಧರೊಬ್ಬರು ನೀರಿನಲ್ಲಿ ಚಪಾತಿಯನ್ನು ತೊಳೆದು ತಿನ್ನುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಚಿನ್ ಕೌಶಿಕ್ ಎಂಬವರು ಫೆಬ್ರವರಿ 20ರಂದು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಾಕಿ ಅದಕ್ಕೆ, ಒಬ್ಬರಿಗೆ ಹೊಟ್ಟೆ ತುಂಬಿದೆ. ಇನ್ನೊಬ್ಬರಿಗೆ ಹಸಿವಾಗಿದೆ. ಯಾರೋ ಎಸೆದ ಚಪಾತಿಯನ್ನು ವೃದ್ಧ ತೊಳೆದು ತಿನ್ನುತ್ತಿದ್ದಾರೆ. ಇದು ಬಹಳ ಮನಕಲಕುವ ವಿಡಿಯೋ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಯಾವುದೋ ರೈಲ್ವೆ ಸ್ಟೇಶನ್‍ನಲ್ಲಿ ಸೆರೆ ಹಿಡಿಯಲಾಗಿದ್ದು, ಇದರಲ್ಲಿ ವೃದ್ಧರೊಬ್ಬರು ಚಪಾತಿಯನ್ನು ನೀರಿನಲ್ಲಿ ತೊಳೆದು ತಿನ್ನುತ್ತಿದ್ದಾರೆ. ಈ ವಿಡಿಯೋ ಎಲ್ಲಿ ಹಾಗೂ ಯಾವಾಗ ಸೆರೆ ಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನೆಟ್ಟಿಗರು ಈ ವಿಡಿಯೋ ನೋಡಿ, ದಯವಿಟ್ಟು ಯಾರು ಊಟವನ್ನು ವ್ಯರ್ಥ ಮಾಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ಹಲವು ಮಂದಿಗೆ ದಿನಕ್ಕೆ ಎರಡು ಹೊತ್ತು ಊಟ ಸಿಗುವುದಿಲ್ಲ. ಹೀಗಿರುವಾಗ ಯಾರು ಸಹ ಊಟವನ್ನು ವ್ಯರ್ಥ ಮಾಡಬೇಡಿ ಎಂದು ರೀ-ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದುವರೆಗೂ ಈ ವಿಡಿಯೋಗೆ 400ಕ್ಕೂ ಹೆಚ್ಚು ವ್ಯೂವ್ಸ್ ಬಂದಿದ್ದು, 108ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಇದರ ಹೊರತಾಗಿ ಹಲವು ಮಂದಿ ಈ ವಿಡಿಯೋಗೆ ರೀ-ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *