ಮೃತಪಟ್ಟ ಮಗನ ಪತ್ನಿಯನ್ನೇ ಮದುವೆಯಾದ ವ್ಯಕ್ತಿ!

Public TV
1 Min Read
MARRIAGE

ವ್ಯಕ್ತಿಯೊಬ್ಬ ಮೃತಪಟ್ಟ ತನ್ನ ಮಗನ ಪತ್ನಿಯನ್ನೇ ಮದುವೆ (Son Wife Marriage) ಯಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ವಯಸ್ಸಾದ ವ್ಯಕ್ತಿಯು, ಮಗ ಮೃತಪಟ್ಟ ಬಳಿಕ ತಾನು ಸೊಸೆಯನ್ನು ಮದುವೆಯಾಗಿರುವುದಾಗಿ ಹೇಳಿರುವುದನ್ನು ನಾವು ಗಂನಿಸಬಹುದಾಗಿದೆ. ಇದನ್ನೂ ಓದಿಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

MARRIAGE

ಇತ್ತ ಮುದುಕನನ್ನು ಮದುವೆಯಾಗಲು ಒಪ್ಪಿದ್ದೀಯಾ ಎಂದು ಮಹಿಳೆಯನ್ನು ಕೇಳಿದಾಗ, ಆಕೆ ಸ್ವ- ಇಚ್ಛೆಯಿಂದಲೇ ಈ ಮದುವೆಗೆ ಒಪ್ಪಿರುವುದಾಗಿ ತಿಳಿಸಿದ್ದಾಳೆ.

ಅಲ್ಲದೆ ಯಾಕೆ ಮಾವನನ್ನು ವರಿಸಿದ್ದೀಯಾ ಎಂದು ಪ್ರಶ್ನಿಸಿದಾಗ, ಅವನನ್ನು ಹೊರತುಪಡಿಸಿ ಬೇರೆ ಯಾರೂ ನನ್ನನ್ನು ನೋಡಿಕೊಳ್ಳುವುದಿಲ್ಲ ಎಂಬ ಯೋಚನೆ ಬಂತು. ಹೀಗಾಗಿ ಆತನನ್ನು ಮದುವೆಯಾಗಲು ಒಪ್ಪಿದೆ ಎಂದು ಹೇಳಿದ್ದಾಳೆ. ಆದರೆ ಈ ಮದುವೆ ಎಲ್ಲಿ ನಡೆದಿದ್ದು ಹಾಗೂ ಇದು ಸತ್ಯನಾ ಅಥವಾ ಸುಳ್ಳಾ ಎಂಬುದು ತಿಳಿದುಬಂದಿಲ್ಲ.

 

Share This Article