ಮ್ಯಾಡ್ರಿಡ್: ಸ್ಪೇನ್‍ನ ವೃದ್ಧರೊಬ್ಬರು 112 ವರ್ಷ ಬದುಕಿರುವ ಮೂಲಕ ವಿಶ್ವದ ಅತ್ಯಂತ ಹಿರಿಯ ಜೀವಿಯಾಗಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.
112 ವರ್ಷ 211 ದಿನ ವಯಸ್ಸಾಗಿರುವ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ, 1909ರ ಫೆಬ್ರವರಿ 11ರಂದು ಲಿಯಾನ್‍ನಲ್ಲಿ ಜನಿಸಿದರು. ಆದರೆ ಅವರು ಯಾವಾಗಲೂ ತಮ್ಮ ಹುಟ್ಟುಹಬ್ಬವನ್ನು ಫೆಬ್ರವರಿ 8ರಂದು ಆಚರಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಕಾಬೂಲ್ ಮಸೀದಿ ಬಳಿ ಬಾಂಬ್ ಸ್ಫೋಟ – ಇಬ್ಬರು ಸಾವು, ಹಲವರಿಗೆ ಗಾಯ
Advertisement
Advertisement
ಇದೀಗ ಅವರನ್ನು ಅತೀ ಹೆಚ್ಚು ವರ್ಷ ಬದುಕಿರುವ ವ್ಯಕ್ತಿ ಎಂದು ಹೇಳಲಾಗಿದೆ. ಇವರಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದರು. ಆದರೆ ಮಗ ಬಾಲ್ಯದಲ್ಲಿಯೇ ತೀರಿಕೊಂಡರು. ಸದ್ಯ ಸ್ಯಾಟರ್ನಿನೋ ಅವರು ತಮ್ಮ ಮಗಳು ಮತ್ತು ಅಳಿಯ ಜೊತೆಯಲ್ಲಿ ವಾಸವಾಗಿದ್ದು, ಇವರಿಗೆ 14 ಜನ ಮೊಮ್ಮಕ್ಕಳು ಮತ್ತು 22 ಜನ ಮರಿ ಮೊಮ್ಮಕ್ಕಳಿದ್ದಾರೆ.
Advertisement
ICYMI: We verified the world’s oldest living man at the age of 112.
— #GWR2022 OUT NOW (@GWR) September 30, 2021
Advertisement
ತಮ್ಮ ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಕೇಳಿದಾಗ ಅವರು, 112 ವರ್ಷ ಅವರು ನೆಮ್ಮದಿಯಿಂದ ಜೀವನ ನಡೆಸಿದ್ದು, ಯಾರನ್ನು ನೋಯಿಸಬೇಡಿ ಮತ್ತು ನೆಮ್ಮದಿಯಿಂದ ಜೀವನ ನಡೆಸಿ ಎಂದಿದ್ದಾರೆ. 4.92 ಅಡಿ ಎತ್ತರವಿರುವ ಸ್ಯಾಟರ್ನಿನೋ, 1936ರಲ್ಲಿ ಆರಂಭವಾದ ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ನಾನು ಕಡಿಮೆ ಎತ್ತರ ಇದ್ದರಿಂದ ಯುದ್ಧದಲ್ಲಿ ಹೋರಾಡುವುದು ತಪ್ಪಿತು ಎಂದಿದ್ದಾರೆ. ಶೂ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ತಮ್ಮ ಪತ್ನಿ ಆಂಟೋನಿನಾ ಬ್ಯಾರಿಯೊ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಿಮ್ಮ ಧೈರ್ಯಕ್ಕೆ ಅವರು ಹೆದರುತ್ತಾರೆ – ಪ್ರಿಯಾಂಕಾಗೆ ಧೈರ್ಯ ತುಂಬಿದ ಸಹೋದರ ರಾಹುಲ್
112 ವರ್ಷ ವಯಸ್ಸಿನ ಸ್ಯಾಟರ್ನಿನೊ ಒಬ್ಬ ಫುಟ್ಬಾಲ್ ಅಭಿಮಾನಿಯಾಗಿದ್ದು, ಫುಟ್ಬಾಲ್ ಆಟವನ್ನು ಹಲವು ವರ್ಷಗಳಿಂದ ಆಡಿದ್ದಾರೆ ಮತ್ತು ಸ್ಥಳೀಯ ತಂಡವಾದ ಪ್ಯುಂಟೆ ಕ್ಯಾಸ್ಟ್ರೋ ಸಹ ಸ್ಥಾಪಿಸಿದ್ದಾರೆ.