ಅತ್ಯಾಚಾರ ಎಸಗಿ ಅಪ್ರಾಪ್ತೆಯನ್ನು 2 ತಿಂಗಳ ಗರ್ಭಿಣಿ ಮಾಡಿದ 73 ವರ್ಷದ ವೃದ್ಧ!

Public TV
1 Min Read
SAKLESHPURA POLICE STATION

ಹಾಸನ: 73 ವರ್ಷದ ವೃದ್ಧನೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಘಟನೆಯೊಂದು ಹಾಸನ (Hasan) ಜಿಲ್ಲೆಯ ಸಕಲೇಶಪುರ (Sakleshura) ತಾಲೂಕಿನಲ್ಲಿ ನಡೆದಿದೆ.

ಮೀಸೆ ಮಂಜಯ್ಯ ಅತ್ಯಾಚಾರ ಮಾಡಿದ ಕೀಚಕನಾಗಿದ್ದು, ಈತ ಏಕಾಂಗಿ ಸಾಮಾಜಿಕ ಹೋರಾಟಗಾರ. ಈತ 13 ವರ್ಷದವಳ ಮೇಲೆ ಅತ್ಯಾಚಾರ ಎಸಗಿದ ಪರಿಣಾಮ ಇದೀಗ ಆಕೆ 2 ತಿಂಗಳ ಗರ್ಭಿಣಿಯಾಗಿದ್ದಾಳೆ (Pregnant).

ಸದ್ಯ ಅಪ್ರಾಪ್ತ ಮಗಳಿಗಾದ ಅನ್ಯಾಯ ಕಂಡು ತಾಯಿ ವಿಷ ಸೇವಿಸಿದ್ದು, ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮೀಸೆ ಮಂಜಯ್ಯನನ್ನು ವಶಕ್ಕೆ ಪಡೆದ ಪೊಲೀಸರು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಇನ್ನು ಅಪ್ರಾಪ್ತೆಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಪೊಲೀಸರು ಆಕೆಯನ್ನು ಬಾಲಮಂದಿರದ ವಶಕ್ಕೆ ನೀಡಿದ್ದಾರೆ.

ಆರೋಪಿಯು ವಿಧವಾ ವೇತನ, ಪಿಂಚಣಿ ಹಣ ಕೊಡಿಸುವುದಾಗಿ ಹೇಳಿ ಹಲವು ಮಹಿಳೆಯರನ್ನು ಎಮೋಷನಲ್ ಬ್ಲಾಕ್‍ಮೇಲ್ ಮಾಡುತ್ತಿದ್ದ ಪ್ರಕರಣವೂ ಇದರ ಜೊತೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

ಒಟ್ಟಿನಲ್ಲಿ ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Web Stories

Share This Article