ಬೆಳಗಾವಿ: ರಾಮದುರ್ಗ (Ramadurga) ತಾಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು (Water Consumption) ಸೇವಿಸಿ ವೃದ್ಧ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರಿಗೆ ಹತ್ತು ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಒಪ್ಪಿಗೆ ನೀಡಿದ್ದಾರೆ ಎಂದು ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.
Advertisement
ನಗರದಲ್ಲಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲುಷಿತ ನೀರು ಸೇವಿಸಿ ರಾಮದುರ್ಗದಲ್ಲಿ ಹಲವಾರು ಜನರು ಅಸ್ವಸ್ಥರಾಗಿದ್ದಾರೆ. ಸದ್ಯಕ್ಕೆ ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಅಸ್ವಸ್ಥರ ಕುರಿತು ಹೆಚ್ಚಿನ ಕಾಳಜಿವಹಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಡಿಎಚ್‍ಒ ಅವರಿಗೆ ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ: JDS ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಉದ್ಯೋಗ, ಕುಟುಂಬಕ್ಕೊಂದು ಮನೆ- HDK ಆಶ್ವಾಸನೆ
Advertisement
Advertisement
ಇನ್ನು ಮುದೇನೂರ ಗ್ರಾಮದಲ್ಲಿ ಆರ್‌ಓ ಪ್ಲಾಂಟ್ ಇದೆ. ಜನರು ಆರ್‌ಓ ಪ್ಲಾಂಟ್ ನೀರನ್ನೇ ಕುಡಿಯಬೇಕು. ಸಿಎಂ ಜೊತೆ ಮಾತಾಡಿ ಮೃತ ಶಿವಪ್ಪ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೇಳಿದ್ದೇನೆ. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಜನ ಇನ್ನೂ ಮುಂದಾದರು ಶುದ್ಧವಾದ ನೀರು ಕುಡಿಯಬೇಕು. ನಲ್ಲಿಗಳ ಮೂಲಕ ಶುದ್ಧವಾದ ನೀರು ಕೊಡುವ ಪ್ರಯತ್ನ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮುದೇನೂರು ಜನರು ಪೈಪ್‍ಲೈನ್ ಮತ್ತು ಬೋರವೇಲ್‍ಗಳಿಂದ ನೀರನ್ನು ಕುಡಿಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ – ನವೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ?