ಮಂಡ್ಯ: ಸಕ್ಕರೆ ನಾಡಿನಲ್ಲಿ ಪುಂಡರ ಅಟ್ಟಹಾಸ ನಿಂತಿಲ್ಲ. ಮಂಡ್ಯದ ಯಲಿಯೂರು ಬಳಿ ಹಾಡಹಗಲೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಲಾಂಗ್ ಹಿಡಿದು ಹಲ್ಲೆ ಮಾಡಿದ ಘಟನೆ ನಡೆದಿದೆ.
Advertisement
ಶಂಕರೇಗೌಡ(60) ಹಲ್ಲೆಗೊಳಗಾದ ವ್ಯಕ್ತಿ. ಇವರು ತೂಬಿನಕೆರೆ ಗ್ರಾಮದ ನಿವಾಸಿ. ಸರಿಯಾಗಿ ಬೈಕ್ ಓಡಿಸಿ ಎಂದಿದ್ದಕ್ಕೆ ಇವರ ಮೇಲೆ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರು: ಕಟೀಲ್
Advertisement
Advertisement
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪುಂಡರು ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು. ಈ ವೇಳೆ ಶಂಕರೇಗೌಡ ಅವರು ಬೈಕ್ ಸರಿಯಾಗಿ ಓಡಿಸಿ ನಿಮ್ಮಿಂದ ಎಲ್ಲರಿಗೂ ತೊಂದರೆಯಾಗುತ್ತೆ. ಹೀಗೆ ಓಡಿಸಿದ್ರೆ ಬೇರೆಯವರು ಸಾಯುತ್ತಾರೆ ಸರಿಯಾಗಿ ಓಡಿಸಿ ಎಂದರು. ಆಗ ನಿನಗೇನೋ ಸುಮ್ಮನೆ ಹೋಗೋ ಎಂದು ಸರಿಯಾಗಿ ಮೀಸೆ ಚಿಗುರದ ಹುಡುಗರು ರೌಡಿಸಂ ಮಾಡಿದ್ದಾರೆ.
Advertisement
ಅಲ್ಲದೆ ಶಂಕರೇಗೌಡ ಅವರನ್ನು ಅಡ್ಡಗಟ್ಟಿ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಬಳಿಕ ಪರಾರಿಯಾಗಿದ್ದಾರೆ. ಘಟನೆಯಿಂದ ಗಂಭೀರ ಗಾಯವಾಗಿರುವ ಶಂಕರೇಗೌಡರಿಗೆ ಮಿಮ್ಸ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.