ಬೆಂಗಳೂರು: ಸಂಚಾರದಲ್ಲಿಲ್ಲದ ಹಳೆಯ ಬಸ್ಸನ್ನು ಮಹಿಳಾ ಪ್ರಯಾಣಿಕರಿಗಾಗಿ ಹೈಟೆಕ್ ಶೌಚಾಲಯವನ್ನಾಗಿ ಪರಿವರ್ತಿಸಿ, ಅವುಗಳನ್ನು ಮೆಜೆಸ್ಟಿಕ್‍ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಬಸ್ ನಿಲ್ದಾಣದಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ.
ಕೆಎಸ್ಆರ್‌ಟಿಸಿ ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ‘ಸ್ತ್ರೀ ಟಾಯ್ಲೆಟ್’ ಲೋಗೋವನ್ನು ಬಿಡುಗಡೆ ಮಾಡಿದೆ.
Advertisement
2016ರಲ್ಲಿ ಪುಣೆ ಮಹಾನಗರ ಪಾಲಿಕೆ, ಪುಣೆ ಮಹಾನಗರ ಪರಿವಾಹನ್ ಮಹಮಂಡಲ್ ಲಿಮಿಟೆಡ್ (ಪಿಎಂಪಿಎಂಎಲ್) ಜೊತೆ ಸೇರಿ ಆರು ಹಳೆಯ ಬಸ್ಸುಗಳನ್ನು ಮೊಬೈಲ್ ಶೌಚಾಲಯಗಳಾಗಿ ಪರಿವರ್ತಿಸಿತ್ತು.
Advertisement
Advertisement
ಪುಣೆಯಲ್ಲಿ ಖಾಸಗಿ ಸಂಸ್ಥೆಯೊಂದು ಹಳೆಯ ಎಸಿ ಅಲ್ಲದ ಬಸ್ಸಿನಲ್ಲಿ ಶೌಚಾಲಯ ನಿರ್ಮಿಸುತ್ತಿದೆ. ಹೀಗಾಗಿ ನಾವು ಅದೇ ರೀತಿ ಶೌಚಾಲಯವನ್ನು ನಿರ್ಮಿಸಲು ಮುಂದಾಗಿದ್ದೇವೆ. ಆದರೆ ಇದನ್ನು ಮಾರ್ಚ್ 8 ರಂದು (ಅಂತರರಾಷ್ಟ್ರೀಯ ಮಹಿಳಾ ದಿನ) ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಆದರೆ ಈ ತಿಂಗಳ ಅಂತ್ಯದ ವೇಳೆಗೆ ಇದು ಬೆಂಗಳೂರಿಗೆ ತಲುಪಲಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಈ ಯೋಜನೆಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ತನ್ನ ಸಿಎಸ್‍ಆರ್ ನಿಧಿಯಡಿಯಲ್ಲಿ 12 ಲಕ್ಷ ರೂಪಾಯಿ ಭರಿಸುತ್ತಿದೆ.
ವಿಶೇಷತೆ ಏನು?
ಬಸ್ಸಿನಲ್ಲಿ ಆರು ಶೌಚಾಲಯಗಳಿರುತ್ತವೆ. ಅವುಗಳಲ್ಲಿ ಮೂರು ಭಾರತೀಯ ಮತ್ತು ಉಳಿದವು ವಿದೇಶಿ ಶೈಲಿಯ ಕಮೋಡ್‍ಗಳು ಇರುತ್ತವೆ. ಅಗತ್ಯ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಲಿಸಲಾಗುತ್ತದೆ. ಫ್ಲಶ್, ಶವರ್, ಸ್ಯಾನಿಟರಿ ನ್ಯಾಪ್ ವೆಂಡಿಂಗ್ ಮೆಷಿನ್, ಮಗುವಿಗೆ ಹಾಲುಣಿಸುವ ರೂಮ್, ಮಕ್ಕಳ ಡೈಪರ್ ಬದಲಾಯಿಸುವ ರೂಮ್ ಮತ್ತು ಪ್ಯಾನಿಕ್ ಬಟನ್ ಅನ್ನು ಹೊಂದಿರುತ್ತದೆ.
ಪ್ರಾಯೋಗಿಕ ಯೋಜನೆಯ ಆಧಾರದ ಮೇಲೆ, ಹೆಚ್ಚು ಹಳೆಯ ಬಸ್ಸಿಗಳನ್ನು ವಾಶ್‍ರೂಮ್‍ಗಳಾಗಿ ನಿಯೋಜಿಸಿ ಕಿಕ್ಕಿರಿದ ಬಸ್ ನಿಲ್ದಾಣಗಳಲ್ಲಿ ಇರಿಸಲಾಗುವುದು. ಈ ಬಯೋ ಶೌಚಾಲಯಗಳು ಮಹಿಳಾ ಉದ್ಯೋಗಿಗಳಿಗೆ ಸಹಕಾರಿಯಾಗುತ್ತವೆ. ಯಾಕೆಂದರೆ ಹೆಚ್ಚಿನ ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿರಲ್ಲ. ಹೀಗಾಗಿ ಈ ರೀತಿಯ ಶೌಚಾಲಯ ಅವರಿಗೆ ಉಪಯುಕ್ತವಾಗುತ್ತವೆ.