– ವಿಹೆಚ್‌ಪಿ, ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ
ಮಾದಕ ನಟಿ ಪೂನಂ ಪಾಂಡೆಯ (Poonam Pandey) ಟಾಪ್‌ಲೆಸ್ ಅವತಾರಗಳು ಹೊಸದೇನಲ್ಲ. ಆಗಾಗ್ಗೆ ತನ್ನ ಮೈಮಾಟವನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುವ ನಟಿ ಈಗ ಹೊಸ ವಿಷಯಕ್ಕೆ ಸುದ್ದಿಯಾಗಿದ್ದಾರೆ.
2013ರಲ್ಲಿ ʻನಶಾʼ ಸಿನಿಮಾ ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿಯಾದ ಪೂನಂ ಪಾಂಡೆ 2018ರ ಬಳಿಕ ಸಿನಿಮಾದಲ್ಲಿ ಅವಕಾಶ ಸಿಗದೇ ಹಿರಿತೆರೆಗಳಿಂದ ದೂರ ಉಳಿದಿದ್ದಾರೆ. ಆಗಾಗ್ಗೆ ವೆಬ್‌ಸಿರೀಸ್ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ತಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸದಾ ಆಕ್ಟೀವ್ ಆಗಿರ್ತಾರೆ. ʻಲವ-ಕುಶʼ ರಾಮಲೀಲಾʼ (Luv Kush Ramlila) ನಾಟಕದಲ್ಲಿ ಮಂಡೋದರಿ ಪಾತ್ರಕ್ಕೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಇದು ಪೂನಂ ಪಾಂಡೆ ಅಭಿಮಾನಿಗಳಿಗೆ ಖುಷಿಯ ವಿಚಾರವೇ ಆದ್ರೂ, ಹಿಂದೂಪರ ಸಂಘಟನೆಗಳು ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಈ ವರ್ಷ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆಯಲಿರುವ ರಾಮಾಯಣ ಆಧರಿತ ನಾಟಕ ʻರಾಮಲೀಲಾʼದಲ್ಲಿ ರಾವಣನ ಪತ್ನಿಯಾದ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಅವರನ್ನ ಆಯ್ಕೆ ಮಾಡಲಾಗಿದೆ. ಪೂನಂ ಜೊತೆಗೆ ರಾವಣನ ಪಾತ್ರದಲ್ಲಿ ಬಣ್ಣ ಹಚ್ಚಲು ನಟ ಆರ್ಯ ಬಬ್ಬರ್ (Arya Babbar) ಸಜ್ಜಾಗಿದ್ದಾರೆ. ಇದನ್ನೂ ಓದಿ: ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು
ರಾವಣನ ಪತ್ನಿ ಮಂಡೋದರಿ ಪಾತ್ರ ನಿರ್ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಪೂನಂ ಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ, ರಾಮಲೀಲಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಐತಿಹಾಸಿಕ ಹಾಗೂ ಭವ್ಯವಾದ ಕಾರ್ಯಕ್ರಮದ ಭಾಗವಾಗೋದಕ್ಕೆ ಅವಕಾಶ ಸಿಕ್ಕಿರುವುದು ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ರಾಮಲೀಲಾ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಆಚರಣೆಯಾಗಿದೆ. ಈ ಕಾರ್ಯಕ್ರಮದ ಭಾಗವಾಗುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ರಾವಣ ಪಾತ್ರಧಾರಿ ನಟ ಆರ್ಯ ಬಬ್ಬರ್ ಕೂಡ ಧನ್ಯವಾದ ಅರ್ಪಿಸಿದ್ದಾರೆ.
ಮಂಡೋದರಿ ಯಾರು ..?
ಮಂಡೋದರಿಯು ಅಸುರ ರಾಜನಾದ ಮಾಯಾಸುರ ಮತ್ತು ಸುಂದರಿ ಅಪ್ಸರೆಯ ಮಗಳು. ಮಂಡೋದರಿ ಕೂಡ ತನ್ನ ತಾಯಿಯಂತೆ ಅತ್ಯಂತ ಸುಂದರಿಯೂ, ಗುಣವಂತಳೂ ಆಗಿದ್ದಳು. ಮಂಡೋದರಿಯ ಸೌಂದರ್ಯಕ್ಕೆ ಮರುಳಾದ ರಾವಣ ಆಕೆಯನ್ನು ವಿವಾಹವಾಗುತ್ತಾನೆ. ರಾವಣ ಮತ್ತು ಮಂಡೋದರಿಗೆ ಜನಿಸಿದ ಮಕ್ಕಳೇ ಮೇಘನಾಥ ಮತ್ತು ಅಕ್ಷಯ ಕುಮಾರ. ಈಕೆಯನ್ನು ರಾಮಾಯಣದಲ್ಲಿ ಮಹಾನ್ ಪತಿವ್ರತೆ ಎಂದು ಉಲ್ಲೇಖಿಸಲಾಗಿದೆ. ರಾವಣ ಎಷ್ಟೇ ಹೀನ ಕಾರ್ಯಗಳನ್ನು ಮಾಡಿದರೂ ಆಕೆ ಅವನನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದವಳೇ ಹೊರತು ಆತನಿಂದ ದೂರಾದವಳಲ್ಲ. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ; ಟ್ರೈನಿ ವೈದ್ಯೆ ಕೇಸ್ ಬಗ್ಗೆ ಪೂನಂ ಪಾಂಡೆ ಪ್ರತಿಕ್ರಿಯೆ
ವಿರೋಧ ಏಕೆ?
ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಅವರ ಆಯ್ಕೆಯನ್ನು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕೆಲ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಸದಾ ತುಂಡುಡುಗೆಯಲ್ಲಿ ಸುತ್ತುವ ನಟಿಯನ್ನು ಪೌರಾಣಿಕ ಪಾತ್ರಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ ಕೂಡಲೇ ಆಯ್ಕೆಯನ್ನು ಕೈಬಿಡುವಂತೆ ಒತ್ತಾಯಿಸಿವೆ. ಇದನ್ನೂ ಓದಿ: ಬೆತ್ತಲೆ ಫೋಟೋ ಹರಿಬಿಟ್ಟು, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ಪೂನಂ ಪಾಂಡೆ
2018ರ ಬಳಿಕ ಸಿನಿಮಾ ಅವಕಾಶ ಸಿಗದೇ ವಂಚಿತವಾಗಿರುವ ಪೂನಂ ಪಾಂಡೆ ಕೊನೆಯದ್ದಾಗಿ ʻಹನಿಮೂನ್ ಸೂಟ್ ರೂಮ್ ನಂ.911ʼ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ʻಲಾಕಪ್ʼ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.