ಚಿಕ್ಕಬಳ್ಳಾಪುರ: ವೃದ್ಧ ದಂಪತಿಯನ್ನು ಮರ್ಡರ್ ಮಾಡಿದ್ದ ಮೂವರು ಆರೋಪಿತಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Advertisement
ಫೆಬ್ರವರಿ 9 ರಂದು ಶಿಡ್ಲಘಟ್ಟ ನಗರದ ಶಾಮಣ್ಣ ಬಾವಿ ಬಳಿ ಬಟ್ಟೆ ವ್ಯಾಪಾರಿ ಶ್ರೀನಿವಾಸ್ ಹಾಗೂ ಅವರ ಪತ್ನಿ ಪದ್ಮಾವತಮ್ಮ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆಗೈಯ್ಯಲಾಗಿತ್ತು. ಮನೆ ಕೆಲಸದಾಕೆ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯ ಮೇಲಿನ ಗವಾಕ್ಷಿ ಮೂಲಕವೂ ಕೊಲೆಗಾರರು ಬಂದಿರುವುದು ಗೊತ್ತಾಗಿತ್ತು. ಮನೆಯಲ್ಲಿದ್ದ ನಗದು, ಚಿನ್ನಾಭರಣ ವೃದ್ಧೆಯ ಕತ್ತಿನಲ್ಲಿದ್ದ ಸರ ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಒಂದು ಒಂದೂವರೆ ತಿಂಗಳು ಕಳೆದರೂ ಸಣ್ಣ ಸುಳಿವು ಸಿಕ್ಕರಲಿಲ್ಲ. ಇತ್ತೀಚೆಗೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನೊರ್ವನನ್ನು ಕುರಿ ಕಳುವು ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಈ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಬಳಿ ಹೆಚ್ಚಿನ ವಿಚಾರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಲ್ಲಿ ಶ್ರೀನಿವಾಸಪುರ ಮೂಲದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವ 18 ವರ್ಷದ ಫೈಝ್ ಹಾಗೂ ಉಳಿದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ.
Advertisement
Advertisement
ಯಾಕೆ ಕೊಲೆ?
ಮೂವರು ಆರೋಪಿಗಳಲ್ಲಿ ಓರ್ವ 18 ವರ್ಷದ ಯುವಕ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಫೈಜ್ ಆಗಿದ್ದರೆ, ಉಳಿದಿಬ್ಬರು ಅಪ್ರಾಪ್ತರಾಗಿದ್ದು, ಫೈಜ್‍ನ ಜೊತೆ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅಂದಹಾಗೆ ಕೊಲೆಗೂ ಮುನ್ನ ಕೆರೆಗಳಲ್ಲಿ ಮೀನು ಹಿಡಿಯುವುದ್ದಕ್ಕೆಂದು ಶ್ರೀನಿವಾಸಪುರದಿಂದ ಶಿಡ್ಲಘಟ್ಟ ಕಡೆ ಬಂದಿದ್ದ ಆರೋಪಿಗಳು. ಒಂದು ವಾರ ಶಿಡ್ಲಘಟ್ಟ ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಿದ್ದು, ಈ ವೇಳೆ ಬಟ್ಟೆ ವ್ಯಾಪಾರಿ ಶ್ರೀನಿವಾಸ್ ಮನೆ ಮೇಲೆ ಕಣ್ಣು ಹಾಕಿ ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಜ್ಯ ಕಾಂಗ್ರೆಸ್‍ನ ಪವರ್ ಪಾಯಿಂಟ್‍ಗಳಲ್ಲ: ಎಂ.ಬಿ.ಪಾಟೀಲ್
Advertisement
ನಂತರ ಫೆಬ್ರವರಿ 9 ರಂದು ಮೂವರಲ್ಲಿ ಒಬ್ಬ ದಾರಿ ಕಾವಲು ಕಾಯುತ್ತಿದ್ದರೆ, ಮತ್ತಿಬ್ಬರಲ್ಲಿ ಓರ್ವ ಬಾಗಿಲು ಬಡಿದಿದ್ದು, ಬಾಗಿಲು ತೆಗೆದ ವೃದ್ದನನ್ನು ಬಲವಾಗಿ ಹೊಡೆದು ಕೆಳಗೆ ಬೀಳಿಸಿದ್ದ. ಅಷ್ಟರಲ್ಲಿ ಮನೆಯ ಮೇಲಿನ ಗವಾಕ್ಷಿ ಮೂಲಕ ಮನೆಗೆ ಇಳಿದಿದ್ದ ಮತ್ತೋರ್ವ ವೃದ್ದೆಗೆ ಬಲವಾಗಿ ಹೊಡೆದು ಕೆಳಗೆ ಬೀಳುವಂತೆ ಮಾಡಿದ್ದ. ಕಳ್ಳತನದ ವೇಳೆ ಇಬ್ಬರು ಜೋರಾಗಿ ಕಿರುಚಾಡಿದ ಕಾರಣ ಇಬ್ಬರನ್ನು ಬೇರೆ, ಬೇರೆ ಕಡೆ ಎಳೆದು ಹಾಕಿ ಹೊಡೆದು ಕೊಲೆ ಮಾಡಿದ್ದರು. ಕೊಲೆ ಮಾಡಿ ಮನೆಯಿಂದ 7,000ಕ್ಕೂ ಹೆಚ್ಚು ಹಣ ಹಾಗೂ 80 ಗ್ರಾಂ ಬಂಗಾರದ ಒಡವೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಇದನ್ನೂ ಓದಿ: ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಬೇಕು: ರಮಾನಾಥ್ ರೈ ಮನವಿ