ಶಿವಮೊಗ್ಗ: ಜೋಗ ಜಲಪಾತದ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಕವಲುಗಳ ಪಕ್ಕದಲ್ಲಿರುವ ಪುರಾತನವಾದ ‘ಬಾಂಬೆ ಬಂಗ್ಲೆ’ ಎದುರಿನ ಗುಡ್ಡ ಕುಸಿಯುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ ಸಂಪೂರ್ಣ ಕಟ್ಟಡ ಜೋಗ ಜಲಪಾತದ ತಳ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಬ್ರಿಟಿಷರ ಕಾಲದ ಬಾಂಬೆ ಬಂಗ್ಲೆಯಲ್ಲಿ ಪ್ರವಾಸಿಗರಿಗೆ, ವಿಐಪಿಗಳಿಗೆ ವಸತಿ ಅವಕಾಶವನ್ನು ಕೊಡುತ್ತಿಲ್ಲ. ಒಂದು ಕಾಲದಲ್ಲಿ ಈ ಕಟ್ಟಡದಿಂದ ಜಲಪಾತದ ನಾಲ್ಕು ಕವಲುಗಳು ಜಲಪಾತದ ತಳದತ್ತ ಬೀಳುವುದನ್ನು ನೋಡುವುದೇ ಒಂದು ಆಕರ್ಷಣೆ ಆಗಿತ್ತು. ಈಗ ಈ ಕಟ್ಟಡದ ನಿರ್ವಹಣೆಗಾಗಿ ಓರ್ವ ಮೇಟಿಯನ್ನು ಮಾತ್ರ ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಕಳೆದ ಐದು ದಿನಗಳ ಮಳೆಯ ರಭಸಕ್ಕೆ ಬಾಂಬೆ ಬಂಗ್ಲೆ ಇರುವ ಗುಡ್ಡ ಕುಸಿಯಲು ಆರಂಭಿಸಿದೆ. ಇದರಿಂದ ಜೋಗ ಜಲಪಾತದ ಎಡ ಪಕ್ಕದಲ್ಲಿ ಕೃತಕವಾದ ಕೆಂಪು ಮಣ್ಣಿನ ಒಂದು ಧಾರೆ ಪ್ರವಾಸಿಗರಿಗೆ ಕಾಣಿಸುತ್ತಿದೆ. ಗುಡ್ಡದಿಂದ ಹರಿದು ಬರುತ್ತಿರುವ ನೀರು ಬಾಂಬೆ ಬಂಗ್ಲೆಯ ತಳದ ಮಣ್ಣನ್ನು ಕೊರೆದು ಜಲಪಾತವಾಗಿ ಧುಮುಕುತಿದೆ. ಇದೇ ರೀತಿ ಮುಂದುವರಿದರೆ ಇನ್ನೆರಡು ದಿನಗಳಲ್ಲಿಯೇ ಸಂಪೂರ್ಣ ಬಂಗ್ಲೆ ತಳ ಸೇರಲಿದೆ.