ಬೆಂಗಳೂರು: ತುರ್ತು ಸಂದರ್ಭದಲ್ಲಿ ಜೀವ ಉಳಿಸಬೇಕಾದ 108 ಅಂಬುಲೆನ್ಸ್ (108 Ambulance) ಗಳು ಬಹುತೇಕ ಡಕೋಟಾ ಎಕ್ಸ್‍ಪ್ರೆಸ್, ಜೊತೆಗೆ ಅಂಬುಲೆನ್ಸ್ ಒಳಗಿರುವ ಸಲಕರಣೆಗಳು ಕೂಡ ಹಳೆಯದಂತೆ. ಹೀಗಂತ ಸ್ವತಃ ಆರೋಗ್ಯ ಸಚಿವ ಡಾ. ಸುಧಾಕರ್ (Dr. Sudhakar) ಅವರೇ ಹೇಳಿದ್ದಾರೆ.
ಹೌದು. 2008ರಲ್ಲಿ ಜಿವಿಕೆ ಸಂಸ್ಥೆ 108 ಅಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದು ಖುದ್ದು ಸರ್ಕಾರಕ್ಕೆ ಇವ್ರ ಸೇವೆ ತೃಪ್ತಿ ಇಲ್ವಂತೆ. ಜೊತೆಗೆ ನಿರೀಕ್ಷಿತ ಮಟ್ಟದ ಸೇವೆಯನ್ನು ಕೊಡುತ್ತಿಲ್ಲ ಅಂತಾ ಆರೋಗ್ಯ ಸಚಿವರೇ ಖುದ್ದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಟೆಂಡರ್ ಮುಗಿದ ಬಳಿಕವೂ ಜಿವಿಕೆ (GVK) ಕೋರ್ಟ್ ಮೊರೆ ಹೋಗಿದ್ರಿಂದ ಇವರ ಸೇವೆಯನ್ನು ಮುಂದುವರಿಸಬೇಕಾಯ್ತು ಎಂದದಿದ್ದಾರೆ.
ಜಿವಿಕೆಯ ವಿರುದ್ಧ ವೇತನ ನೀಡದ ಹಿನ್ನೆಲೆಯಲ್ಲಿ ಸಿಬ್ಬಂದಿ ಸಿಡಿದೆದ್ದಿದ್ರಿಂದ 108 ಸೇವೆ ವ್ಯತ್ಯಯವಾಗುವ ಆತಂಕ ಇತ್ತು. ಆದರೆ ಇಂದು ಇದರ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಭೆ ಕರೆದಿದೆ. ಹೀಗಾಗಿ ಸಮಸ್ಯೆ ಬಗೆಹರಿಯುವ ನಿರೀಕ್ಷೆಯೂ ಇದೆ. ಇದನ್ನೂ ಓದಿ: 108 ಅಂಬುಲೆನ್ಸ್ ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ: ಆರೋಗ್ಯ ಇಲಾಖೆ ಸ್ಪಷ್ಟನೆ
ಸದ್ಯ ನ್ಯಾಯಾಲಯದ ಮೂಲಕ ವಿವಾದ ಬಗೆಹರಿಸಿಕೊಂಡಿರುವ ಸರ್ಕಾರ ಇನ್ನೆರಡು ತಿಂಗಳಲ್ಲಿ 108 ಅಂಬುಲೆನ್ಸ್ ಸೇವೆಯ ಹೊಸ ಟೆಂಡರ್ ಕೂಡ ಕರೆಯಲಿದೆ. ಈ ಬಾರಿ ಉತ್ಕೃಷ್ಟ ಗುಣಮಟ್ಟದ ಅಂಬುಲೆನ್ಸ್ ಸೇವೆ ನೀಡುವವರಿಗೆ ಟೆಂಡರ್ ನೀಡಲಾಗುತ್ತೆ ಹಲವು ಬದಲಾವಣೆಗಳನ್ನು ಈ ಬಾರಿ ಮಾಡಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.