ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ

Public TV
1 Min Read
amoolya gowda 5

ಕಿರುತೆರೆ ನಟಿ ಅಮೂಲ್ಯ ಗೌಡ (Amoolya Gowda) ಇದೀಗ ಸ್ಯಾಂಡಲ್‌ವುಡ್ (Sandalwood) ಪಾದಾರ್ಪಣೆ ಮಾಡಿದ್ದಾರೆ. `ಕುರುಡು ಕಾಂಚಾಣ’ (Kurudu Kanchana) ಸಿನಿಮಾ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾರೆ. ಈ ಬೆನ್ನಲ್ಲೇ `ಒಲವ ಘಮವು’ ಎಂಬ ಆಲ್ಬಂ ಸಾಂಗ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ. ಅಮೂಲ್ಯ ತಂಡದ ಹೊಸ ಹೆಜ್ಜೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಿದ್ದಾರೆ.

amoolya gowda 1 1

ಟಿವಿಪರದೆಯಲ್ಲಿ ಮಿಂಚ್ತಿದ್ದ ನಟಿ ಅಮೂಲ್ಯ ಗೌಡ ಅವರು ಈಗ ಆಲ್ಬಂ ಸಾಂಗ್‌ನಿಂದ ಗಮನ ಸೆಳೆಯುತ್ತಿದ್ದಾರೆ. ʻಒಲವ ಘಮವುʼ ಎಂಬ ಬ್ಯೂಟಿಫುಲ್ ಟ್ರ್ಯಾಕ್ ಅನ್ನ `ಮಾರ್ಟಿನ್’ ಹೀರೋ ಧ್ರುವ ಸರ್ಜಾ (Dhruva Sarja) ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭಹಾರೈಸಿದ್ದಾರೆ. ಸಾಂಗ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಹೊಸಬರಿಗೆ ಸದಾ ಸಾಥ್ ನೀಡುವ ಧ್ರುವ ಇದೀಗ ಅಮೂಲ್ಯ ಆ್ಯಂಡ್ ಟೀಂ ಪ್ರಯತ್ನಕ್ಕೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ:  ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ

ಈ ಸುಂದರ ಹಾಡಿನ ಮೂಲಕ ಮುದ್ದಾದ ಪ್ರೇಮ ಕಥೆಯನ್ನ ತೋರಿಸಲಾಗಿದೆ. ಮುಖ್ಯ ಭೂಮಿಕೆಯಲ್ಲಿ ನಟಿ ಅಮೂಲ್ಯ ಮತ್ತು ಆನಂದ್ ಜೀವತುಂಬಿದ್ದಾರೆ. ಮೀರಾ ಚಂದ್ರ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ಕಿರಣ್ ಕೃಷ್ಣಮೂರ್ತಿ ಅವರು ಸಂಗೀತ ನೀಡಿದ್ದು, ಸಾಯಿ ಸರ್ವೇಶ್ ಸಾಹಿತ್ಯ ಬರೆದಿದ್ದಾರೆ.

amoolya gowda

`ಒಲವ ಘಮವು’ ಸಾಂಗ್ ರಿಲೀಸ್ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಸಾಂಗ್ ಸದ್ದು ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *