ಬೆಂಗಳೂರು: ಓಲಾ, ಊಬರ್ ಆ್ಯಪ್ ಆಧಾರಿತ ಆಟೋಟೋಪಕ್ಕೆ ಸರ್ಕಾರ ಮೂಗುದಾರ ಹಾಕಿದೆ. ಪ್ರಯಾಣಿಕರು, ಆಟೋ ಚಾಲಕರಿಂದ ಸುಲಿಗೆ ಮಾಡ್ತಿದ್ದ ಓಲಾ, ಊಬರ್ ಗೆ ಸರ್ಕಾರ ಕೊಂಚ ಬಿಸಿ ಮುಟ್ಟಿಸಿದೆ.
ನಾಳೆಯಿಂದ ಓಲಾ (OLA), ಊಬರ್ ಆಟೋ ಓಡಾಟ ಬಂದ್ ಇರಲಿದೆ. ಓಲಾ, ಊಬರ್ ಆಧಾರಿತ ಆಟೋಗಳು ರಸ್ತೆಗಿಳಿದ್ರೆ ನಾಳೆಯಿಂದ ಭಾರೀ ಮೊತ್ತದ ದಂಡ ಬೀಳಲಿದೆ. ಆದರೆ ದಂಡದ ಹೊರೆ ಆಪ್ ಕಂಪನಿಗಳ ಮೇಲಿರಲಿದೆ. ಆ್ಯಪ್ ಆಧಾರಿತ ಆಟೋಗಳು ಕಂಡ್ರೆ ಕಂಪನಿಗೆ 5 ಸಾವಿರ ದಂಡ ಬೀಳಲಿದೆ. ಆಟೋ (uto) ಚಾಲಕರ ಮೇಲೆ ಯಾವುದೇ ಕಾರಣಕ್ಕೂ ದಂಡ ವಿಧಿಸಲ್ಲ. ಇದಕ್ಕಂತನೇ ಸಹಾಯವಾಣಿ ಕೂಡ ತೆರೆಯಲಾಗಿದೆ. 2021ರಲ್ಲೇ ಲೈಸನ್ಸ್ ರದ್ದಾಗಿದ್ದರೂ ಓಲಾ, ಊಬರ್ (Uber) ರೂಲ್ಸ್ ಬ್ರೇಕ್ ಮಾಡಿರೋದು ಸಾರಿಗೆ ಇಲಾಖೆ ಕಣ್ಣು ಕೆಂಪಾಗಿಸಿದೆ.
ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ (Government), ಕೊನೆಗೂ ಆಟೋಗಳಿಗೆ ದರ ನಿಗದಿ ಮಾಡಿದೆ. 2 ಕಿ.ಮೀ 30ರೂ. ದರ ನಿಗದಿ ಮಾಡಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ್ರೆ ಕ್ರಮ ಅಂತ ಸಾರಿಗೆ ಇಲಾಖೆ ಎಚ್ಚರಿಸಿದೆ. ಅಲ್ಲದೆ ಜಿಎಸ್‍ಟಿ ದರ ಕೂಡ ಸೇರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಲ್ಡಿಂಗ್ ಕುಸಿದು ಇಬ್ಬರ ಸಾವು
ಇತ್ತ ಸಾರಿಗೆ ಇಲಾಖೆ ನಾಳೆಯಿಂದ ಆಪ್ ಆಧಾರಿತ ಆಟೋ ಸಂಚಾರ ಬಂದ್ ಎಂದಿದ್ದಾರೆ. ಆದರೆ ಸಾರಿಗೆ ಸಚಿವರು ಹೇಳಿದ್ದೇ ಬೇರೆ. ಆಟೋಗಳು ಬೇಕಾದರೆ ಓಡಾಡಲಿ, ಕಡಿಮೆ ದರದಲ್ಲಿ ಸೇವೆ ನೀಡಲಿ ಅಂತ ರಾಮುಲು (Sriramulu) ಹೇಳಿರೋದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಪ್ರಯಾಣಿಕರ ಬಳಿಯೂ ಸುಲಿಗೆ, ಚಾಲಕರ ಬಳಿಯೂ ಸುಲಿಗೆ ಮಾಡ್ತಿದ್ದ ಓಲಾ-ಊಬರ್ ಸಂಸ್ಥೆ ಆಟೋಟೋಪಕ್ಕೆ ಬ್ರೇಕ್ ಬಿದ್ದಿದೆ. ನಾಳೆ ಆಪ್ ಆಧಾರಿತ ಆಟೋಗಳು ರಸ್ತೆಗಿಳಿದ್ರೆ ದಂಡ ಮಾತ್ರ ಫಿಕ್ಸ್.