ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಕಂಪೆನಿಯು ಏಕಾಏಕಿ ತನ್ನ 4 ಸಾವಿರ ಚಾಲಕರನ್ನು ಬ್ಲಾಕ್ ಲಿಸ್ಟ್ ಮಾಡಿ, ಸೇವೆಯಿಂದ ತೆಗೆದು ಹಾಕಿದೆ.
ನಗರದಾದ್ಯಂತ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡತ್ತಿರುವ ಓಲಾ ಕಂಪೆನಿಯು, ಗ್ರಾಹಕರ ಪ್ರತಿಕ್ರಿಯೆ ಆಧಾರದ ಮೇಲೆ 4 ಸಾವಿರ ಚಾಲಕರನ್ನು ಏಕಾಏಕಿ ಸೇವೆಯಿಂದ ತೆಗೆದು ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಓಲಾವು ಗ್ರಾಹಕರೊಂದಿಗೆ ಚಾಲಕರು ಅಸಭ್ಯ ವರ್ತನೆ ಹಾಗೂ ಅಜಾಗರೂಕ ಚಾಲನೆ ಮಾಡಿದ್ದಲ್ಲದೇ, ಇನ್ನೂ ಅನೇಕ ದೂರುಗಳು ಚಾಲಕರ ವಿರುದ್ಧ ಹೆಚ್ಚಾಗಿ ಕೇಳಿ ಬಂದ್ದಿದ್ದವು. ಹೀಗಾಗಿ ಈ ನಿರ್ಣವನ್ನು ತೆಗೆದುಕೊಂಡಿದೆ ಎಂದು ತಿಳಿಸಿದೆ.
Advertisement
Advertisement
ಓಲಾದ ಏಕಾಏಕಿ ನಿರ್ಧಾರದಿಂದ ಕಂಗಾಲಾಗಿರುವ ಚಾಲಕರುಗಳು ಸೋಮವಾರ ಓಲಾ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡದೆ ಏಕಾಏಕಿ ಟರ್ಮಿನೇಟ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪೆನಿಯ ನಿರ್ಧಾರದಿಂದ ಕಷ್ಟಪಟ್ಟು ಸಾಲ ಮಾಡಿಕೊಂಡು ಕಾರು ಚಲಾಯಿಸುತ್ತಿದ್ದ ಎಷ್ಟೋ ಚಾಲಕರು ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ: ಮಹಿಳೆಗೆ ನೀಲಿ ಚಿತ್ರ ತೋರಿಸಿದ ಬೆಂಗ್ಳೂರಿನ ಓಲಾ ಡ್ರೈವರ್!
Advertisement
ಕೇವಲ ಗ್ರಾಹಕರ ಪ್ರತಿಕ್ರಿಯೆ ಪಡೆದು ಟರ್ಮಿನೇಟ್ ಮಾಡಿರುವುದು ಎಷ್ಟು ಸರಿ, ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರನ್ನು ತೆಗೆದು ಹಾಕಬಹುದಾಗಿತ್ತು. ಯಾವುದೇ ಮಾಹಿತಿ ನೀಡದೇ ಕ್ಷುಲ್ಲಕ ವಿಚಾರಗಳಿಗೆ ಬಹುತೇಕ ಚಾಲಕರನ್ನು ಓಲಾವು ತೆಗೆದು ಹಾಕಿದೆ ಎಂದು ಚಾಲಕರೋರ್ವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv