ನವದೆಹಲಿ: ಮಾರಾಟ ಪ್ರಕ್ರಿಯೆ ಆರಂಭಗೊಂಡ ಮೊದಲ ದಿನವೇ 600 ಕೋಟಿ ರೂ. ಮೌಲ್ಯದ 80 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಗೊಂಡಿದೆ ಎಂದು ಓಲಾ ಹೇಳಿದೆ.
ಎಸ್1 ಮಾದರಿಯ ಸ್ಕೂಟರ್ ಅನ್ನು ಸೆ.15 ಮತ್ತು 16 ರಂದು ಆನ್‍ಲೈನ್ ಮೂಲಕ ಖರೀದಿಸಲು ಗ್ರಾಹಕರಿಗೆ ಅವಕಾಶ ನೀಡಿತ್ತು. ಈ ಮೊದಲು 499 ರೂ. ಮುಂಗಡ ಪಾವತಿಸಿದವರು
20 ಸಾವಿರ ರೂ. ಪಾವತಿಸಿ ಸ್ಕೂಟರ್ ಖರೀದಿ ಮಾಡಿದ್ದಾರೆ.
Advertisement
Advertisement
ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸೆಕೆಂಡಿಗೆ 4 ಸ್ಕೂಟರ್ ಗಳು ಮಾರಾಟಗೊಂಡಿದೆ ಎಂದು ಓಲಾ ಸಿಇಒ ಭವೀಶ್ ಅಗರವಾಲ್ ತಿಳಿಸಿದ್ದಾರೆ.
Advertisement
India is committing to EVs and rejecting petrol! We sold 4 scooters/sec at peak & sold scooters worth 600Cr+ in a day! Today is the last day, purchase will shut at midnight. So lock in this introductory price and buy on the Ola app before we sell out! https://t.co/TeNiMPEeWX pic.twitter.com/qZtIWgSvaN
— Bhavish Aggarwal (@bhash) September 16, 2021
Advertisement
ಭಾರತ ಎಲೆಕ್ಟ್ರಿಕ್ ವಾಹನಗಳಿಗೆ ಬದ್ಧವಾಗಿದೆ ಮತ್ತು ಪೆಟ್ರೋಲ್ ಅನ್ನು ತಿರಸ್ಕರಿಸಿದೆ. 4 ಸೆಕೆಂಡಿಂಗ್ ಒಂದು ಸ್ಕೂಟರ್ ಮಾರಾಟ ಮಾಡಿದ್ದೇವೆ ಮತ್ತು 600 ಕೋಟಿ ರೂ. ಮೌಲ್ಯದ ಸ್ಕೂಟರ್ ಅನ್ನು ಒಂದೇ ದಿನದಲ್ಲಿ ಮಾರಾಟ ಮಾಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
Those in industry who feel EV revolution is not real, this????????
“The line it is drawn
The curse it is cast
The slow one now
Will later be fast
As the present now
Will later be past
The order is rapidly fadin
And the first one now
Will later be last
For the times they are a-changin”
— Bhavish Aggarwal (@bhash) September 16, 2021
ಓಲಾ ಕಂಪನಿ ಎರಡು ಮಾದರಿಯಲ್ಲಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಎಸ್ 1 ಬೆಲೆ 99,999 ರೂ., ಎಸ್ 1 ಪ್ರೊ ಬೆಲೆ 1.29 ಲಕ್ಷ ರೂ. ದರವನ್ನು ನಿಗದಿ ಮಾಡಿದೆ. ಇದನ್ನೂ ಓದಿ: ಭಾರತದಲ್ಲಿ ಬಾಗಿಲು ಮುಚ್ಚಲಿದೆ ಫೋರ್ಡ್
5 reasons why you need to bring home the revolution today! ⚡????
Do NOT miss out, we repeat DO NOT MISS OUT! ????????♀️
Only 7 hours left! ⏰
If you've reserved, purchase now on https://t.co/gUPNf66pPB#JoinTheRevolution ???? pic.twitter.com/euCucxsSU5
— Ola Electric (@OlaElectric) September 16, 2021
ಬುಕ್ಕಿಂಗ್ ಮಾಡಿ ಖರೀದಿ ಮಾಡಿದ ಗ್ರಾಹಕರಿಗೆ ಅಕ್ಟೋಬರ್ ತಿಂಗಳಿನಿಂದ ಡೆಲಿವರಿ ಮಾಡಲಾಗುವುದು. ಯಾರು ಮೊದಲು ಬುಕ್ಕಿಂಗ್ ಮಾಡಿದ್ದಾರೋ ಅವರಿಗೆ ಮೊದಲು ಡೆಲಿವರಿ ಮಾಡಲಾಗುತ್ತದೆ ಎಂದು ಮುಖ್ಯ ಮಾರುಕಟ್ಟೆ ಅಧಿಕಾರಿ ವರುಣ್ ದುಬೆ ತಿಳಿಸಿದ್ದಾರೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ
ಮೊದಲ ಹಂತದಲ್ಲಿ ವರ್ಷಕ್ಕೆ 20 ಲಕ್ಷ ಸ್ಕೂಟರ್ ಉತ್ಪಾದನೆ ಮಾಡುವ ಗುರಿಯನ್ನು ಓಲಾ ಹಾಕಿಕೊಂಡಿದೆ. ಘಟಕ ಪೂರ್ಣವಾಗಿ ಆರಂಭಗೊಂಡರೆ ವರ್ಷಕ್ಕೆ 1 ಕೋಟಿ ಸ್ಕೂಟರ್ ಉತ್ಪಾದನೆ ಮಾಡಲಾಗುವುದು. ಇದು ವಿಶ್ವದ ದೊಡ್ಡ ದ್ವಿಚಕ್ರ ವಾಹನ ಫ್ಯಾಕ್ಟರಿ ಎಂದು ಕಂಪನಿ ಹೇಳಿಕೊಂಡಿದೆ.
\