ನವದೆಹಲಿ: ಆಯಿಲ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸುಮಾರು 20 ಸಾವಿರ ಲೀಟರ್‍ನಷ್ಟು ಪೆಟ್ರೋಲ್ ಕೆಳಗೆ ಚೆಲ್ಲಿ ರಸ್ತೆ ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಇಲ್ಲಿನ ಮೂಲ್‍ಚಂದ್ ಅಂಡರ್‍ಪಾಸ್ ಬಳಿ ಇಂದು ಬೆಳಿಗ್ಗೆ ಟ್ಯಾಂಕರ್ ಪಲ್ಟಿಯಾಗಿದೆ. ಈ ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆಂದು ಎಎನ್‍ಐ ವರದಿ ಮಾಡಿದೆ. ಘಟನೆಯಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಕಚೇರಿಗೆ ತೆರಳುತ್ತಿದ್ದವರು ಪರದಾಡುವಂತಾಗಿದೆ.
Advertisement
Advertisement
ಸದ್ಯ ದೆಹಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಟ್ಯಾಂಕರನ್ನು ರಸ್ತೆಯಿಂದ ಸ್ಥಳಾಂತರಿಸುವ ಕಾರ್ಐ ಮಾಡುತ್ತಿದ್ದು, ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆಂದು ವರದಿಯಾಗಿದೆ.
Advertisement
ಟ್ಯಾಂಕರ್‍ನ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ. ರಸ್ತೆಗೆ ಚೆಲ್ಲಿದ ಪೆಟ್ರೋಲ್ ಈಗಿನ ಮಾರುಕಟ್ಟೆ ದರದ ಪ್ರಕಾರ ಅಂದಾಜು 13 ಲಕ್ಷ ಮೌಲ್ಯದ್ದಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
Advertisement
Delhi | 20,000 litres of petrol gets spilled on road as tanker overturned at Moolchand Underpass,2 injured. Traffic movement affected pic.twitter.com/RcxPvECnLO
— TIMES NOW (@TimesNow) June 20, 2017
Petrol tanker overturns in Delhi's Moolchand underpass 20,000 ltr petrol wasted huge traffic jam: https://t.co/WqfjoTrqcJ via @YouTube
— Technical Simi (@technicalsimi) June 20, 2017
#Delhi 20,000 litres of petrol gets spilled on road as tanker overturned at Moolchand Underpass,2 injured. Traffic movement affected pic.twitter.com/H27UVQEJvM
— ANI (@ANI) June 20, 2017