ಫ್ರೀಟೌನ್: ಟ್ಯಾಂಕರ್‌ನಿಂದ ಆಯಿಲ್ ಲೀಕ್ ಆಗಿದ್ದು, ಈ ವೇಳೆ ತೈಲ ಸಂಗ್ರಹಿಸಲು ಮುಗಿಬಿದ್ದ 92 ಮಂದಿ ಅಗ್ನಿಗಾಹುತಿಯಾಗಿದ್ದಾರೆ.
ಆಫ್ರಿಕಾದ ಸಿಯೇರಾ ಲಿಯೋನ್‍ನಲ್ಲಿ ನಡೆದ ಭೀಕರ ಟ್ಯಾಂಕರ್ ಸ್ಫೋಟದಲ್ಲಿ 92ಕ್ಕೂ ಹೆಚ್ಚುಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇರಾಕ್ ಪ್ರಧಾನಿ ನಿವಾಸದ ಮೇಲೆ ಡ್ರೋನ್ ದಾಳಿ!
Advertisement
TANKER KILLS 84 IN SIERRA LEONE
A fuel tanker blast in Sierra Leone killed at least 84 according to CNN reports #KhendoNews pic.twitter.com/g5iwBSPj9C
— Khendo FM, 107.9 (@Khendo_FM) November 6, 2021
Advertisement
ಇಂಧನ ತುಂಬಿದ್ದ ಟ್ಯಾಂಕರ್ ಲಾರಿಯಿಂದ ಸೋರಿಕೆಯಾಗಿದ್ದು, ಇದನ್ನು ಸಂಗ್ರಹಿಸಲು ಜನ ಮುಗಿನಿದ್ದರು. ಈ ವೇಳೆ ಬಸ್‍ವೊಂದು ಟ್ಯಾಂಕರ್‍ಗೆ ಡಿಕ್ಕಿಯಾದ ಪರಿಣಾಮ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ. ಆಗ ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಹಠಾತ್ ಹಾರ್ಟ್ ಅಟ್ಯಾಕ್ ಆದಾಗ ಏನ್ ಮಾಡ್ಬೇಕು?
Advertisement
Advertisement
ಬೆಂಕಿ ಹೊತ್ತಕೊಂಡಿದ್ದು, ನೋಡನೋಡುತ್ತಿದ್ದಂತೆ ರಸ್ತೆ ಮೇಲಿದ್ದ ಕಾರುಗಳು ಹಾಗೂ ಬೈಕ್‍ಗಳಿಗೆ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ. ಇನ್ನು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.