ಟೆಲ್ ಅವಿವ್: ಹಮಾಸ್ (Hamas) ಬಂಡುಕೋರರು ಮತ್ತು ಇಸ್ರೇಲ್ (Israel) ನಡುವಿನ ಮಿಲಿಟರಿ ಘರ್ಷಣೆಗಳು ಮಧ್ಯಪ್ರಾಚ್ಯದಾದ್ಯಂತ ರಾಜಕೀಯ ಅನಿಶ್ಚಿತತೆ ಸೃಷ್ಟಿಸಿದೆ. ಉತ್ಪನ್ನಗಳ ಸರಬರಾಜಿನಲ್ಲಿ ಸಮಸ್ಯೆ ಎದುರಾಗಿದ್ದು, ತೈಲ ಬೆಲೆಯಲ್ಲಿ (Oil Price) ಹೆಚ್ಚಳವಾಗಿದೆ.
ಇಸ್ರೇಲ್ ಮತ್ತು ಗಾಜಾದಲ್ಲಿನ ಪರಿಸ್ಥಿತಿಯು ಮಧ್ಯಪ್ರಾಚ್ಯದ ಉತ್ಪಾದನೆಗಳಿಗೆ ಅಡ್ಡಿಪಡಿಸಿದೆ. ಹೀಗಾಗಿ ತೈಲ ಬೆಲೆಗಳು ಸೋಮವಾರ 4% ರಷ್ಟು ಜಿಗಿತ ಕಂಡಿದೆ. ತೈಲ ಬೆಲೆಯು ಬ್ಯಾರಲ್‌ಗೆ 249.67 ರೂ. ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಭೀಕರ ಸಂಘರ್ಷ – 1,100 ಸಾವು, ಸಂಗೀತ ಉತ್ಸವದಲ್ಲಿ 260 ಶವ ಪತ್ತೆ
US ತೈಲದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI), ಒಂದು ಬ್ಯಾರೆಲ್‌ಗೆ 86 ಡಾಲರ್ ಅಂದರೆ 7,157 ರೂ. ಗಿಂತ ಹೆಚ್ಚಾಗಿದೆ. ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಕೂಡ ಏರಿತು.
ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶಗಳು ತೈಲ ಉತ್ಪಾದಕರಲ್ಲ. ಆದರೆ ಮಧ್ಯಪ್ರಾಚ್ಯ ಪ್ರದೇಶವು ಜಾಗತಿಕ ಪೂರೈಕೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಇರಾನ್ ಮತ್ತು ಸೌದಿ ಅರೇಬಿಯಾದಂತಹ ಹತ್ತಿರದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಿಗೆ ಯುದ್ಧದ ಪರಿಣಾಮ ತಟ್ಟಲಿದ್ದು, ತೈಲದ ಮೇಲಿನ ದರ ಹೆಚ್ಚಾಗಿದೆ. ಇದನ್ನೂ ಓದಿ: ಇಸ್ರೇಲ್ ಮೇಲೆ ದಾಳಿ – ಹಮಾಸ್ ಉಗ್ರರ ಅಟ್ಟಹಾಸಕ್ಕೆ 1 ಸಾವಿರ ಮಂದಿ ಬಲಿ
ಗಲ್ಫ್ ಪ್ರದೇಶದಲ್ಲಿನ ಪ್ರಮುಖ ತೈಲ ರಫ್ತುದಾರರಿಗೆ ಹಾರ್ಮುಜ್ ಜಲಸಂಧಿಯು ನಿರ್ಣಾಯಕವಾಗಿದೆ. ಅವರ ಆರ್ಥಿಕತೆಯು ತೈಲ ಮತ್ತು ಅನಿಲ ಉತ್ಪಾದನೆ ಕೇಂದ್ರೀಕರಿಸಲ್ಪಟ್ಟಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲೂ ತೈಲ ಬೆಲೆ ಏರಿಕೆಯಾಗಿತ್ತು. 2022 ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ತೈಲ ಬೆಲೆಗಳು ಗಗನಕ್ಕೇರಿತ್ತು. ಕಳೆದ ವರ್ಷ ಜೂನ್‌ನಲ್ಲಿ ಬ್ಯಾರೆಲ್‌ಗೆ 9,988 ರೂ.ಗೆ ತಲುಪಿತ್ತು.
Web Stories