ನವದೆಹಲಿ: ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಉಕ್ರೇನ್‍ಗೆ ಪತ್ರ ಕಳುಹಿಸಿದ ಬಳಿಕ ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆಯಾಗಿದ್ದು 100 ಡಾಲರ್(7,459 ರೂ.) ಹತ್ತಿರ ಬಂದಿದೆ. ಭಾರತದಲ್ಲಿ ಸದ್ಯ ತೈಲಬೆಲೆ ಏರಿಕೆಯಾಗಿಲ್ಲವಾದರೂ ಶೀಘ್ರವೇ ಏರಿಕೆಯಾಗುವ ಸಾಧ್ಯತೆ ಇದೆ.
ಏಪ್ರಿಲ್‍ನಲ್ಲಿ ಮಾರಾಟವಾಗುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.18 ರಷ್ಟು ಏರಿಕೆಯಾಗಿದ್ದು ಬೆಲೆ 99.38 ಡಾಲರ್(7,415 ರೂ.)ಗೆ ತಲುಪಿದೆ. ಈಗ ಪಂಚರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿದ್ದರೂ ಭಾರತದಲ್ಲಿ ಏರಿಕೆ ಕಂಡಿಲ್ಲ. ಪಂಚರಾಜ್ಯ ಚುನಾವಣೆ ಅಂತ್ಯವಾದ ಬಳಿಕ ತೈಲಬೆಲೆ ಭಾರತದಲ್ಲೂ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಯರ್ ಪ್ರಿಯರಿಗೆ ಕಹಿ ಸುದ್ದಿ
ನವೆಂಬರ್ 4 ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಕಚ್ಚಾತೈಲ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. 2014ರ ಬಳಿಕ ಇಲ್ಲಿಯವರೆಗೆ ತೈಲ ಬೆಲೆ 100ರ ಗಡಿ ದಾಟಿಲ್ಲ. ಈಗ ಯುದ್ಧ ಭೀತಿ ನಿರ್ಮಾಣಗೊಂಡಿದ್ದು ಭಾರತದಲ್ಲೂ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.