ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಏರಿಕೆ ಕಂಡಿದೆ. 7 ವರ್ಷಗಳ ಬಳಿಕ 1 ಬ್ಯಾರೆಲ್‍ಗೆ ತೈಲದ ದರ 90 ಡಾಲರ್ (6,765 ರೂ.) ತಲುಪಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
Advertisement
ಉಕ್ರೇನ್ ಮೇಲೆ ರಷ್ಯಾ ಯುದ್ಧದ ಕಾರ್ಮೋಡ ಆವರಿಸಿರುವ ಪರಿಣಾಮ ಕಚ್ಚಾತೈಲ ದರ ಏರಿಕೆ ಕಂಡಿದೆ. 90 ಡಾಲರ್ ಗಡಿ ದಾಟಿರುವ ಕಚ್ಚಾತೈಲ ಬೆಲೆ 125 ಡಾಲರ್‌ಗೆ ಏರಿಕೆಯಾಗಬಹುದು ಎಂದು ವರದಿಯಾಗಿದೆ. ಇದನ್ನೂ ಓದಿ: ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ
Advertisement
Advertisement
ಕಳೆದ ಒಂದು ವಾರಗಳ ಹಿಂದೆ ಬ್ಯಾರಲ್‍ಗೆ 80 ಡಾಲರ್ (6,013 ರೂ.) ಇದ್ದ ಬೆಲೆ ಇದೀಗ 90 ಡಾಲರ್‌ಗೆ ಬಂದು ತಲುಪಿದೆ. ಇದಲ್ಲದೆ 2014ರ ಬಳಿಕ ಇದೀಗ ಮತ್ತೆ ರಷ್ಯಾದಲ್ಲಿ ಯುದ್ಧದ ಸನ್ನಿವೇಶ ಆರಂಭಗೊಂಡಿದೆ ಹಾಗಾಗಿ ತೈಲ ಹೊರೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ
Advertisement
ನವೆಂಬರ್ 4 ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಆಗಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆದ ಪರಿಣಾಮ ಭಾರತದಲ್ಲಿ ತೈಲ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಜಾಗತೀಕ ಮಟ್ಟದಲ್ಲಿ ತೈಲ ದರ ಏರಿಕೆ ಆದರೆ ಭಾರತದಲ್ಲಿ ತೈಲ ದರ ಏರಿಕೆ ಅನಿವಾರ್ಯವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಸರಿದೂಗಿಸಲು ಭಾರತ ಗ್ರಾಹಕರ ಮೇಲೆ ಮತ್ತೆ ತೈಲ ದರ ಹೊರೆಯಾಗಿಸುವುದು ಅನಿವಾರ್ಯದಂತಿದೆ.
ಸದ್ಯಕ್ಕಿಲ್ಲ ದರ ಏರಿಕೆ:
ಮೂಲಗಳ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆ ಕಂಡರೂ ಕೂಡ ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಇರುವುದರಿಂದಾಗಿ ಸದ್ಯಕ್ಕೆ ಬೆಲೆ ಏರಿಕೆ ಮಾಡುವ ಸಾಹಸಕ್ಕೆ ಸರ್ಕಾರ ಕೈ ಹಾಕದಿರಲು ಮುಂದಾಗಿದೆ. ಪಂಚರಾಜ್ಯಗಳ ಚುನಾವಣೆ ಬಳಿಕ ತೈಲ ದರ ಏರಿಕೆ ಸಾಧ್ಯತೆ ಹೆಚ್ಚಿದೆ.