ಲಂಡನ್: ಬ್ರಿಟನ್‍ನಲ್ಲಿ ತೈಲ ಬಿಕ್ಕಟ್ಟು ಉಂಟಾಗಿರುವ ಪರಿಣಾಮ ಪೆಟ್ರೋಲ್‍ಗಾಗಿ ಜನರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
Advertisement
ಅಗತ್ಯಕ್ಕೆ ತಕ್ಕ ತೈಲ ಸಂಗ್ರಹವಿದ್ದರೂ ಜನರು ಅತಂಕಕ್ಕೆ ಒಳಗಾಗಿ, ಪೆಟ್ರೋಲ್ ಬಂಕ್ ಎದರು ಕಿಲೋಮೀಟರ್ ವರೆಗೂ ನಿಂತು ತೈಲ ಖರೀದಿಗೆ ಮುಗಿಬಿದ್ದಿದ್ದಾರೆ. ಇದಕ್ಕೆ ಕಾರಣ ಪೆಟ್ರೋಲ್ ಡೀಸೆಲ್ ಕೊರೆತೆ ಅಲ್ಲವೇ ಅಲ್ಲ. ಬದಲಾಗಿ ತೈಲ ತುಂಬಿದ ಟ್ರಕ್‍ಗಳನ್ನು ಓಡಿಸಲು ಚಾಲಕರೇ ಸಿಗುತ್ತಿಲ್ಲ ಎಂದು ವರದಿಯಾದ ಹಿನ್ನೆಲೆ ಬ್ರಿಟನ್ ಜನರು ಅತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: 10 ತಿಂಗಳ ಶಿಕ್ಷೆ ತಪ್ಪಿಸಲು 9 ವರ್ಷದಿಂದ ತಲೆ ಮರೆಸಿಕೊಂಡ ಆರೋಪಿ ಅಂದರ್
Advertisement
ಬ್ರಿಟನ್‍ನಲ್ಲಿ ಚಾಲಕರ ಕೊರತೆ ಎದರುರಾಗಿದ್ದು, ಟ್ರಕ್‍ಗಳನ್ನು ಓಡಿಸಲು ಚಾಲಕರು ಸಿಗುತ್ತಿಲ್ಲ. ಈ ಹಿನ್ನೆಲೆ ದೇಶದ ಶೇ.90 ರಷ್ಟು ಪೆಟ್ರೋಲ್ ಪಂಪ್‍ಗಳಲ್ಲಿ ಡೀಸೆಲ್, ಪೆಟ್ರೋಲ್ ಸಿಗುತ್ತಿಲ್ಲ. ಇದರಿಂದಾಗಿ ಜನರು ಪೆಟ್ರೋಲ್ ಸಿಗುವ ಕಡೆಯಲ್ಲಿ ಕಿಲೋಮೀಟರ್ ವರೆಗೂ ನಿಂತು ತೈಲ ಖರೀದಿಸುತ್ತಿದ್ದಾರೆ.
Advertisement
Advertisement
ಬ್ರಿಟನ್, ಐರೋಪ್ಯ ಒಕ್ಕೂಟದಿಂದ ಹೊರ ಬಂದ ಬಳಿಕ 13 ಲಕ್ಷಕ್ಕೂ ಅಧಿಕ ವಿದೇಶಿ ಜನರು ದೇಶ ತೊರೆದಿದ್ದಾರೆ. ಇದರಿಂದ ಬ್ರಿಟನ್ ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಚಾಲಕರು ಕೆಲಸ ಬಿಟ್ಟಿದ್ದಾರೆ. ಅಲ್ಲದೆ ಕೊರೊನಾ ಕಾರಣದಿಂದ ಸಾಕಷ್ಟು ಮಂದಿ ತಮ್ಮ ತಮ್ಮ ದೇಶಕ್ಕೆ ಮರಳಿದ್ದಾರೆ. ಹೀಗಾಗಿ ಬ್ರಿಟನ್‍ನಲ್ಲಿ ಹೊಸ ರೀತಿಯ ತೈಲ ಬಿಕ್ಕಟ್ಟು ಉಂಟಾಗಿದೆ. ಇದನ್ನೂ ಓದಿ: ಅವಧಿಗೂ ಮುನ್ನವೇ ಪೂರ್ಣಗೊಳ್ಳಲಿದೆ ಏಷ್ಯಾದ ಉದ್ದ ಸುರಂಗ ರಸ್ತೆ
ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತಿದಂತೆ ಎಚ್ಚೆತ್ತಾ ಸರ್ಕಾರ, ಸದ್ಯಕ್ಕೆ ಯೋಧರನ್ನು ಚಾಲಕರಾಗಿ ಬಳಸಿಕೊಳ್ಳಲು ಮುಂದಾಗಿದೆ. ಅಲ್ಲದೆ 5000 ಸಾವಿರ ಜನ ವಿದೇಶಿ ಚಾಲಕರಿಗೆ ತುರ್ತು ವೀಸಾ ನೀಡಿ ದೇಶಕ್ಕೆ ಕರೆಸಿಕೊಳ್ಳಲು ನಿರ್ಧಾರ ಮಾಡಿದೆ. ಕಾಂಪಿಟೇಷನ್ ಆಕ್ಟ್ 1998 ತೈಲೊದ್ಯಮಕ್ಕೆ ವಿನಾಯ್ತಿಯನ್ನು ಸಹ ನೀಡಲು ಚಿಂತಿಸಿ, ಘನ ವಾಹನ ಪರವಾನಗಿ ಇರುವವರನ್ನು ಕೆಲಸಕ್ಕೆ ಬರಲು ಮನವಿ ಮಾಡಿದೆ.