ಓ ಮೈ ಗಾಡ್: ಅಕ್ಷಯ್ ಕುಮಾರ್ ಶಿವನಾಗೋದು ಬೇಡ ಅಂದಿತಾ ಸೆನ್ಸಾರ್ ಮಂಡಳಿ?

Public TV
2 Min Read
Oh My God 2

ಮೈ ಗಾಡ್ 2 ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಶಿವನಾಗಿ (Shiva) ನಟಿಸಿದ್ದಾರೆ. ಈ ಪಾತ್ರವೇ ಚಿತ್ರಕ್ಕೆ ಮುಳುವಾಗಿದೆ ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿಯು ಈ ಪಾತ್ರವನ್ನೇ ಸಿನಿಮಾದಿಂದ ಕೈ ಬಿಡುವಂತೆ ಸೂಚಿಸಿದೆಯಂತೆ. ಶಿವನ ಬದಲು ಶಿವ ದೂತನನ್ನಾಗಿ ಮಾಡಿ ಎಂದು ಸಲಹೆ ನೀಡಿದೆಯಂತೆ. ಅಲ್ಲದೇ, ಅಕ್ಷಯ್ ಕುಮಾರ್ ಮೈ ಬಣ್ಣವನ್ನು ನೀಲಿ ಮಾಡಿದ್ದರಿಂದ ಥೇಟ್ ಶಿವನ ಅವತಾರವೆಂಬಂತೆ ಕಾಣುವುದರಿಂದ ಆ ಬಣ್ಣವನ್ನೂ ಬದಲಿಸಲು ಹೇಳಿದೆಯಂತೆ. ಹಾಗಾಗಿ ಚಿತ್ರತಂಡಕ್ಕೆ ಈ ಎಲ್ಲ ಅಂಶಗಳು ತಲೆನೋವಾಗಿವೆ.

OH my god 2 1

ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಡ್ 2’ (Oh My God 2)  ಸಿನಿಮಾಗೆ ಈವರೆಗೂ ಸೆನ್ಸಾರ್ ಮಂಡಳಿಯು ಪ್ರಮಾಣ ಪತ್ರ ನೀಡಿರಲಿಲ್ಲ. ವಿವಾದಿತ ಅಂಶಗಳು ಇರುವ ಕಾರಣದಿಂದಾಗಿ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು (Censor) ಕೊಡಲು ನಿರಾಕರಿಸಿತ್ತು (Denial). ಜೊತೆಗೆ ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿತ್ತು. ಇದೀಗ ಪ್ರಮಾಣ ಪತ್ರ ಸಿಕ್ಕಿದೆ.

Akshay Kumar 1

ಸಿನಿಮಾದ ಒಟ್ಟು 20 ಕಡೆ ದೃಶ್ಯಗಳನ್ನು ಕತ್ತರಿಸಲು ತಿಳಿಸಲಾಗಿದೆ. ಕೆಲವು ಕಡೆ ಮಾತುಗಳನ್ನು ಮ್ಯೂಟ್ ಮಾಡಲು ಹೇಳಲಾಗಿದೆಯಂತೆ. ಇಷ್ಟೆಲ್ಲ ಮಾಡಿದರೂ ಚಿತ್ರಕ್ಕೆ ವಯಸ್ಕರು ನೋಡಬಹುದಾದ ಸಿನಿಮಾ ಎಂದು ‘ಎ’ ಸರ್ಟಿಫಿಕೇಟ್ ನೀಡಲಾಗಿದೆ. ಈ ಕಾರಣದಿಂದಾಗಿ ಚಿತ್ರತಂಡ ತಲೆಬಿಸಿ ಮಾಡಿಕೊಂಡಿದೆ.

Akshay Kumar 3

ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಲಾಗಿದೆಯಂತೆ. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

OH my god 2 2

ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ (Krishna) ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ (Shiva) ಅವತಾರವೆತ್ತಿದ್ದಾರೆ. ಈ ಹಿಂದೆ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದನ್ನು ಅಕ್ಷಯ್ ಅಭಿಮಾನಿಗಳು ಅಪಾರವಾಗಿ ಮೆಚ್ಚಿದ್ದರು.

akshay kumar 3

ಹೇಳಿ ಕೇಳಿ ಇದೊಂದು ಕಾಮಿಡಿ ಸಿನಿಮಾ. ಶಿವನ ರೂಪದಲ್ಲಿ ಬಂದಿರುವ ಅಕ್ಷಯ್, ಯಾವೆಲ್ಲ ಲೀಲೆಗಳನ್ನು ಪರದೆಯ ಮೇಲೆ ಆಡುತ್ತಾರೋ ಕಾದು ನೋಡಬೇಕು. ಟೀಸರ್ ನಲ್ಲಿಯೂ ಹಲವು ಕಾಮಿಡಿ ಅಂಶಗಳು ಇದ್ದು, ಇಡೀ ಸಿನಿಮಾ ಹಾಸ್ಯದ ರಸದೌತಣವನ್ನು ನೀಡುವುದು ಪಕ್ಕಾ ಅನ್ನುವಂತಿದೆ ರಿಲೀಸ್ ಆದ ಟೀಸರ್.

ಟೀಸರ್ ನೋಡಿ ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದರೆ ಬೈಕಾಟ್ ಮಾಡುವುದಾಗಿಯೂ ಕೆಲವರು ಕಾಮೆಂಟ್ ಮಾಡಿದ್ದರು. ಅಂದಹಾಗೆ ಅಕ್ಷಯ್ ಕುಮಾರ್ ಜೊತೆ ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

Web Stories

Share This Article