ಹಾವೇರಿ: ಜಿಲ್ಲೆಯ ಕನಕಾಪುರ (Kanakapura) ಗ್ರಾಮದ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಒಂದು ತಿಂಗಳು ಕಳೆದರೂ, ಅಧಿಕಾರಿಗಳು ಕಾಲುವೆ ಸರಿಪಡಿಸಿಲ್ಲ. ರೈತರಿಗೆ ವರವಾಗುವ ಬದಲು ಯು.ಟಿ.ಪಿ ಕಾಲುವೆ (Upper Tunga canal) ಮುಳುವಾಗಿದೆ.
ಯು.ಟಿ.ಪಿ ಕಾಲುವೆ ಒಡೆದು ತಿಂಗಳಾದರೂ ಸರ್ಕಾರಿ ಅಧಿಕಾರಿಗಳು ಡೋಂಟ್ ಕೇರ್ ಅಂತಿದ್ದಾರೆ. ನಿರಂತರವಾಗಿ ರೈತರ ಜಮೀನುಗಳಿಗೆ ನೀರು ಹರಿಯುತ್ತಿದೆ. ಭಾರೀ ಮಳೆಯಿಂದ ಕಾಲುವೆ ಒಡೆದು ಸುಮಾರು 300 ಎಕರೆ ಜಮೀನು ಜಲಾವೃತಗೊಂಡು ಬೆಳೆ ಹಾನಿ ಆಗಿತ್ತು. ಮೆಕ್ಕೆಜೋಳ, ಹತ್ತಿ, ಕಬ್ಬು ಸೇರಿದಂತೆ ಕೈಗೆ ಬಂದ ಬೆಳೆ ನೀರುಪಾಲಾಗಿ ಹಾನಿಯಾಗಿದೆ. ಇದನ್ನೂ ಓದಿ: ಆಫ್ರಿಕಾ ವಿರುದ್ಧ ಸರಣಿ ಗೆದ್ದ ಬಳಿಕ ಪತ್ನಿಯೊಂದಿಗೆ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸೂರ್ಯಕುಮಾರ್ ಭೇಟಿ
ಕಾಲುವೆ ಒಡೆದು ತಿಂಗಳಾದರೂ ಪರಿಹಾರವೂ ಇಲ್ಲ, ಕಾಲುವೆ ದುರಸ್ತಿಯೂ ಇಲ್ಲ. ಸಮೀಕ್ಷೆ ನಡೆಸಿ ಬೆಳೆಹಾನಿ ವರದಿ ಪಡೆದು ಪರಿಹಾರ ನೀಡುವುದಾಗಿ ಹೇಳಿದ್ದ ಡಿ.ಸಿ ವಿಜಯ್ ಮಹಾಂತೇಶ್ ಹೇಳಿದರು. ಆದರೆ ಇದುವರೆಗೂ ಪರಿಹಾರವೂ, ಕಾಲುವೆ ದುರಸ್ತಿನೂ ಮಾಡಲಿಲ್ಲ. ಈ ಕಾರಣಕ್ಕೆ ಜಿಲ್ಲಾಡಳಿತದ ವಿರುದ್ಧ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Tumakuru| ಶಾಲಾ ಶಿಕ್ಷಕಿಯ ವಾಹನ ಅಡ್ಡಗಟ್ಟಿ ಸರಗಳ್ಳತನ