ಬೆಂಗಳೂರು: ಹಲವು ದಿನಗಳಿಂದ ಆ ರಾಜಕಾಲುವೆಯ ತಡೆಗೋಡೆ ನಿಧಾನಕ್ಕೆ ಕುಸಿಯುತ್ತಲೇ ಇದೆ. ಇದರಿಂದ ಪಕ್ಕದ ಬಿಬಿಎಂಪಿ ಪಾರ್ಕ್ ಗೋಡೆ (BBMP Park Wall), ರಸ್ತೆಗೂ ಹಾನಿಯಾಗುವ ಭೀತಿ ಶುರುವಾಗಿದೆ. ತಡೆಗೋಡೆ ಬಳಿಯ ಬೃಹತ್ ಮರವು ನೆಲಕ್ಕುರುಳುವ ಸ್ಥಿತಿಗೆ ಬಂದಿದೆ. ಆದ್ರೆ ಅಧಿಕಾರಿಗಳು ಮಾತ್ರ ಕಾಟಾಚಾರದ ಕೆಲಸಕ್ಕೆ ಮುಂದಾಗಿದ್ದಾರೆ.
ಒಮ್ಮೆ ಈ ದೃಶ್ಯಗಳನ್ನ ನೋಡಿ.. ಹಂತ ಹಂತವಾಗಿ ರಾಜಕಾಲುವೆಯ (Rajakaluve) ತಡೆಗೋಡೆ ಕುಸಿಯುತ್ತಿದೆ. ಇದರಿಂದ ಪಕ್ಕದ ಬಿಬಿಎಂಪಿ ಪಾರ್ಕ್ ಗೋಡೆ, ರಸ್ತೆಗೂ ಹಾನಿಯಾಗುವ ಆತಂಕ ಶುರುವಾಗಿದೆ. ಇದು ಹೊಸಹಳ್ಳಿ ಮೆಟ್ರೋ ನಿಲ್ದಾಣ ಮುಂಭಾಗದ ರಸ್ತೆ. ಕುಸಿಯುತ್ತಿರೋ ರಾಜಕಾಲುವೆಗೆ ತಡೆಗೋಡೆ ಕಟ್ಟೋದನ್ನ ಬಿಟ್ಟು ಕಟ್ಟಿಗೆಗಳನ್ನ ಕಟ್ಟಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣಕ್ಕೆ ದುರಸ್ಥಿ ಕಾರ್ಯ ಮಾಡಬೇಕೆಂದು ಒತ್ತಾಯಿಸ್ತಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತದ ಗೆಲುವುಗಾಗಿ ವಿಶೇಷ ಪೂಜೆ- ಬೆಂಗಳೂರು ಕ್ರೀಡಾಭಿಮಾನಿಗಳಿಂದ ಶುಭ ಹಾರೈಕೆ
ಕಳೆದ 15 ದಿನಗಳ ಹಿಂದೆ ರಾಜಕಾಲುವೆ ಕುಸಿತದ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಮಾಡಿತ್ತು. ವರದಿ ಬಳಿಕ ಸ್ಥಳೀಯ ಬಿಬಿಎಂಪಿ ಇಂಜಿನಿಯರ್ಸ್ ರಾಜಕಾಲುವೆ ಸುತ್ತ ಕಟ್ಟಿಗೆಗಳನ್ನ ಕಟ್ಟಿದ್ದಾರೆ. ರಾಜಕಾಲುವೆಯ ತಡೆಗೋಡೆ ದಿನೇ ದಿನೇ ನಿಧಾನಕ್ಕೆ ಕುಸಿಯುತ್ತಿದ್ದು, ಸದ್ಯ ಪಾರ್ಕ್ ಗೋಡೆ ಬಿರುಕು ಬಿಟ್ಟಿದ್ದು, ರಸ್ತೆಗೂ ಹಾನಿಯಾಗುವ ಆತಂಕ ಶುರುವಾಗಿದೆ. ಇದನ್ನೂ ಓದಿ: Champions Trophy | ಇಂಡೋ-ಪಾಕ್ ಕಾದಾಟದ ರೋಚಕ ಇತಿಹಾಸ – ಹೈವೋಲ್ಟೇಜ್ ಕದನದಲ್ಲಿ ಯಾರ ಕೈ ಮೇಲು?
ವಿಜಯನಗರದಿಂದ ವೆಸ್ಟ್ ಹಾಫ್ ಕಾರ್ಡ್ ರಸ್ತೆಯ ಫ್ಲೈ ಓವರ್‌ಗೆ ಹೋಗುವ ಮಾರ್ಗದಲ್ಲಿ ಈ ರಾಜಕಾಲುವೆ ಇದೆ. ಹಲವು ದಿನಗಳಿಂದ ರಾಜಕಾಲುವೆ ಕುಸಿಯುತ್ತಲೇ ಇದ್ದು, ತಡೆಗೋಡೆ ನಿರ್ಮಾಣ ಮಾಡಬೇಕೆಂದು ಜನ ಒತ್ತಾಯಿಸ್ತಿದ್ದಾರೆ. ಕಟ್ಟಿಗೆಗಳನ್ನ ಕಟ್ಟಿ ದುರಸ್ಥಿ ಕಾರ್ಯಕ್ಕೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರಾ..? ಅಥವಾ ಇಷ್ಟಕ್ಕೆ ಸೀಮಿತ ಮಾಡ್ತಾರಾ ಅನ್ನೋ ಗೊಂದಲದಲ್ಲಿ ಜನ ಇದ್ದಾರೆ. ದುರಸ್ಥಿ ಕಾರ್ಯ ಮಾಡೋದಾಗಿದ್ರೆ ಕನಿಷ್ಟ ಕಾಮಗಾರಿ ಪ್ರಗತಿಯ ಕುರಿತು ಬೋರ್ಡ್ ಆದ್ರೂ ಹಾಕಬೇಕಿತ್ತು. ಅದು ಕೂಡ ಆಗಿಲ್ಲ. ಬೃಹತ್ ರಾಜಕಾಲುವೆ ಮತ್ತಷ್ಟು ಕುಸಿದ್ರೆ ರಸ್ತೆಗೂ ಹಾನಿಯಾಗುವ ಸಾಧ್ಯತೆಯಿದ್ದು, ಕೂಡಲೇ ದುರಸ್ಥಿ ಕಾರ್ಯ ಮಾಡಬೇಕಿದೆ.