ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತುತ ವಾಸವಿರುವ ಸರ್ಕಾರಿ ಬಂಗಲೆ ಕಾವೇರಿ ಖಾಲಿ ಮಾಡುವಂತೆ ಕಳೆದ 2-3 ತಿಂಗಳಿನಿಂದ ಹಲವಾರು ಬಾರಿ ಲೋಕೋಪಯೋಗಿ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಮನೆ ಖಾಲಿ ಮಾಡುತ್ತಿಲ್ಲ. ಆದ್ದರಿಂದ ಈಗ ಮನೆ ವಿವಾದ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.
ಸಿದ್ದರಾಮಯ್ಯನವರಿಗೆ ಹಂಚಿಕೆ ಆಗಿರುವ ಕುಮಾರಕೃಪಾ ಅನೆಕ್ಷ್ಚರ್ 1ಕ್ಕೆ ಅವರು ಹೋಗುತ್ತಿಲ್ಲ. ಇತ್ತ ಕಾವೇರಿ ನಿವಾಸಕ್ಕೆ ಬರಬೇಕಿದ್ದ ಸಿಎಂ ಯಡಿಯೂರಪ್ಪ ತಮ್ಮ ಖಾಸಗಿ ನಿವಾಸದಲ್ಲೇ ಇರಬೇಕಾಗಿದೆ. ಆದರೆ ಸಿದ್ದರಾಮಯ್ಯ ಪಾಲಿಗೆ ಬೇರೆ ನಿವಾಸ ಹಂಚಿಕೆ ಆಗಿದ್ದರೂ ಕಾವೇರಿ ನಿವಾಸ ಖಾಲಿ ಮಾಡುತ್ತಿಲ್ಲ. ಖಾಲಿ ಮಾಡದಿರುವುದಕ್ಕೆ ಸರಿಯಾದ ಕಾರಣವನ್ನು ನೀಡುತ್ತಿಲ್ಲ. ಇದರಿಂದ ಬೇಸತ್ತ ಅಧಿಕಾರಿಗಳು ಮಾಜಿ ಸಿಎಂಗೆ ಮನೆ ಖಾಲಿ ಮಾಡಲು ಒಂದು ವಾರದ ಗಡುವು ನೀಡಿದ್ದಾರೆ.
Advertisement
Advertisement
ನೀಡಿರುವ ಗಡುವು ಮೀರಿದರೆ ಕೋರ್ಟ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ಒಂದು ವಾರದಲ್ಲಿ ಮಾಜಿ ಸಿಎಂ ಮನೆ ಖಾಲಿ ಮಾಡುತ್ತಾರಾ ಅಥವಾ ಅಧಿಕಾರಿಗಳು ಯೋಚಿಸಿದಂತೆ ಕೋರ್ಟ್ ನೋಟಿಸ್ ಬಂದ ನಂತರ ಖಾಲಿ ಮಾಡುತ್ತಾರಾ ಎನ್ನುವುದೇ ಸದ್ಯದ ಕುತೂಹಲ.