-ಪುರಭವನ ಸಿಬ್ಬಂದಿಯಿಂದ ಎಡವಟ್ಟು
ಬೆಂಗಳೂರು: ನಗರದ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಮಹನೀಯ ವ್ಯಕ್ತಿಗಳಿಗೆ ಅಪಮಾನವಾಗಿದೆ. ಕಸದ ರಾಶಿಯಲ್ಲಿ ನಾಡಪ್ರಭು ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳು ಕಂಡು ಬಂದಿದೆ.
ಇತ್ತೀಚೆಗೆ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಕುವೆಂಪು, ವಿವೇಕಾನಂದ ಹಾಗೂ ಕೆಂಪೇಗೌಡರ ಭಾವಚಿತ್ರ ಫಲಕಗಳನ್ನು ತರಲಾಗಿತ್ತು. ಈ ಕಾರ್ಯಕ್ರಮ ಮುಗಿದ ಬಳಿಕ ಸಿಬ್ಬಂದಿ ಪುರಭವನ ಸ್ವಚ್ಛಗೊಳಿಸಿದ್ದರು. ಈ ವೇಳೆ ಸಿಬ್ಬಂದಿ ಮಹನೀಯರ ಭಾವಚಿತ್ರಗಳನ್ನು ಕಸದ ಜೊತೆ ಹಾಕಿದ್ದಾರೆ.
ಕಾರ್ಯಕ್ರಮದ ಬಳಿಕ ಈ ಫಲಕಗಳನ್ನು ತೆಗೆದುಕೊಂಡು ಹೋಗದೇ ಆಯೋಜಕರು ಪುರಭವನದಲ್ಲೇ ಬಿಟ್ಟು ಹೋಗಿದ್ದರು. ಆಯೋಜಕರ ಎಡವಟ್ಟು ಹಾಗೂ ಪುರಭವನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಾಡು ನುಡಿಗೆ ಶ್ರವಿಸಿದವರಿಗೆ ಅಗೌರವವಾಗಿದೆ.
ಇತ್ತೀಚೆಗಷ್ಟೇ ಸರ್ಕಾರದಿಂದ ಕೆಂಪೇಗೌಡ ಜಯಂತಿಯ ಅದ್ಧೂರಿ ಆಚರಣೆ ನಡೆದಿತ್ತು. ಬಿಬಿಎಂಪಿಯ ಕೂಗಳತೆ ದೂರದಲ್ಲಿಯೇ ನಾಡಪ್ರಭುಗೆ ಅವಮಾನ ನಡೆದಿದೆ. ಡಿಸೆಂಬರ್ 29ರಂದು ಕುವೆಂಪು ಜನ್ಮದಿನದ ಆಚರಣೆ ನಡೆಸಲಾಯಿತು. ಇದೇ ತಿಂಗಳ 12ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv