ರಾಯಚೂರು: ಮುಂಗಾರು ಬೆಳೆಹಾನಿ ಪರಿಹಾರದ ಅರ್ಜಿ ತೆಗೆದುಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಯೊಬ್ಬ ರೈತರಿಂದ ಹಣ ವಸೂಲಿ ಮಾಡುವುದನ್ನ ರೈತರೇ ವಿಡಿಯೋ ಚಿತ್ರಿಕರಿಸಿ ಬಯಲು ಮಾಡಿದ್ದಾರೆ.
ರಾಯಚೂರಿನ ಲಿಂಗಸುಗೂರು ತಾಲೂಕಿನ ಚಿತ್ತಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾವೂರು, ಚಿತ್ತಾಪೂರ, ರೋಡಲಬಂಡಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿ ಶಿವಪ್ಪ ಸೋಮನಾಳ ಮೇಲೆ ಲಂಚದ ಆರೋಪ ಕೇಳಿ ಬಂದಿದೆ.
Advertisement
Advertisement
ಪ್ರತಿಯೊಬ್ಬ ರೈತರಿಂದ 200, 300 ರೂಪಾಯಿಗಳನ್ನ ವಸೂಲಿ ಮಾಡಿ ಅರ್ಜಿಯನ್ನು ಮುಂದಕ್ಕೆ ಕಳುಹಿಸುವುದಾಗಿ ಹೇಳುತ್ತಿದ್ದಾನೆ. ಇದುವರೆಗೂ 120 ಕ್ಕೂ ಹೆಚ್ಚು ಜನರಿಂದ ಹಣ ವಸೂಲಿ ಮಾಡಿದ್ದಾನೆ ಅಂತ ರೈತರು ಆರೋಪಿಸಿದ್ದಾರೆ.
Advertisement
ಆದ್ರೆ ಅರ್ಜಿಯನ್ನು ಆನ್ ಲೈನ್ ಮೂಲಕವೇ ತುಂಬಿ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಬೇಕು. ಅರ್ಜಿಯೊಂದಿಗೆ ಆಧಾರ ಕಾರ್ಡ್‍ನ್ನೂ ಲಿಂಕಮಾಡಬೇಕು. ಬೆಳೆಪರಿಹಾರಕ್ಕೆ ಅರ್ಜಿ ಹಾಕುವ ಪ್ರಕ್ರೀಯೆ ಈಗಾಗಲೇ ಎರಡು ತಿಂಗಳ ಹಿಂದೆಯೇ ಮುಗಿದ್ದಿದ್ದರೂ, ಆಫ್‍ಲೈನ್ ಅರ್ಜಿ ತುಂಬಬೇಕು ಅಂತ ಶಿವಪ್ಪ ಹಣ ವಸೂಲಿಗೆ ಇಳಿದಿದ್ದಾನೆ ಅಂತ ರೈತರು ಹೇಳಿದ್ದಾರೆ.
Advertisement
ಈ ಬಗ್ಗೆ ಲಿಂಗಸುಗೂರು ತಹಶೀಲ್ದಾರ್ ಶಿವಾನಂದ್ ಸಾಗರ್‍ಗೂ ದೂರು ನೀಡಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಶಿವಾನಂದ್ ಸಾಗರ್ ತಿಳಿಸಿದ್ದಾರೆ.