ಸಿಎಂ, ಡಿಸಿಎಂ ಫೋಟೋ ಹೊಂದಿದ್ದ 73 ಕುಕ್ಕರ್ ವಶಕ್ಕೆ ಪಡೆದ ಅಧಿಕಾರಿಗಳು

Public TV
1 Min Read
Cooker

ತುಮಕೂರು: ಲೋಕಸಭಾ ಚುನಾವಣೆ (General Elections 2024) ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹೊತ್ತಿನಲ್ಲಿ ರಾಜಕೀಯ ಮುಖಂಡರು ಮತದಾರರನ್ನು ಸೆಳೆಯಲು ಆಮೀಷ ಒಡ್ಡಲು ಮುಂದಾಗುತ್ತಿದ್ದಾರೆ. ಕುಣಿಗಲ್‍ನಲ್ಲಿ (Kunigal) ಮತದಾರರಿಗೆ ಹಂಚಲು ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 73 ಕುಕ್ಕರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕುಕ್ಕರ್ ಬಾಕ್ಸ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಸೇರಿದಂತೆ ಸಂಸದ, ಶಾಸಕರ ಭಾವಚಿತ್ರಗಳಿವೆ. ಜೊತೆಗೆ ಬಾಕ್ಸ್ ಮೇಲೆ ಹೊಸ ವರ್ಷ ಹಾಗೂ ಸಂಕ್ರಾತಿ ಶುಭಾಶಯಗಳು ಎಂದು ಮುದ್ರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಎಲ್ಲಾ ಕುಕ್ಕರ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: INDIA ಗೆದ್ದರೆ ಮೇಕೆದಾಟು ಯೋಜನೆಗೆ ತಡೆ: ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಣೆ

ಕುಣಿಗಲ್ ಪಟ್ಟಣದ ಮಲ್ಲಿಪಾಳ್ಯದ ಕಾಂಗ್ರೆಸ್ ಪುರಸಭಾ ಸದಸ್ಯ ನಾಗೇಂದ್ರ ಅವರಿಗೆ ಸೇರಿದ ಗೋದಾಮಿನಲ್ಲಿ ಕುಕ್ಕರ್‌ಗಳನ್ನು ಸಂಗ್ರಹಿಸಿಡಲಾಗಿತ್ತು. ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

Share This Article