ಬಾಲಿವುಡ್ (Bollywood) ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ (Aamir Khan) `ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಸಿನಿಮಾ ನಂತರ ಬ್ರೇಕ್ ತೆಗೆದುಕೊಂಡಿದ್ದಾರೆ. ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಅಮೀರ್ ಕುಟುಂಬದಿಂದ ಇದೀಗ ಸಿಹಿಸುದ್ದಿ ಸಿಕ್ಕಿದೆ.
ಚಿತ್ರರಂಗಕ್ಕೆ ಸಾಕಷ್ಟು ಸ್ಟಾರ್ ಕಿಡ್‌ಗಳ ಎಂಟ್ರಿಯಾಗಿದೆ. ಇತ್ತೀಚಿಗೆ ಶಾರುಖ್ ಖಾನ್ ಮಗಳು ಸುಹಾನಾ ಬಿಗ್ ಬಿ ಮೊಮ್ಮಗ ಎಂಟ್ರಿ ಕೊಟ್ಟಿದ್ದರು. ಈ ಬೆನ್ನಲ್ಲೇ ಸಿನಿಮಾಗೆ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಎಂಟ್ರಿಯಾಗುತ್ತಿದೆ. ಮಾಜಿ ದಂಪತಿ ಅಮೀರ್-ರೀನಾ ದತ್ ಪುತ್ರ ಬಿಟೌನ್‌ಗೆ (Films) ಪಾದಾರ್ಪಣೆ ಮಾಡ್ತಿದ್ದಾರೆ. ಇದನ್ನೂ ಓದಿ: ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ವೀರಪ್ಪನ್ ಮಗಳು ಪಾದಾರ್ಪಣೆ
ತಮಿಳಿನ ಸೂಪರ್ ಹಿಟ್ ಸಿನಿಮಾ `ಲವ್ ಟುಡೇ’ (Love Today) ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಜುನೈದ್ ಖಾನ್ ಎಂಟ್ರಿ ಕೊಡ್ತಿದ್ದಾರೆ. ಬಾಲಿವುಡ್‌ಗೆ ನಟನಾಗಿ ಎಂಟ್ರಿ ಕೊಡಲು ಸಕಲ ತಯಾರಿ ನಡೆಯುತ್ತಿದೆ. ಶ್ರೀದೇವಿ (Sridevi) ಪುತ್ರಿ ಖುಷಿ ಕಪೂರ್ (Kushi Kapoor) ಜೊತೆ ಜುನೈದ್ (Junaid Khan) ರೊಮ್ಯಾನ್ಸ್ ಮಾಡಲಿದ್ದಾರೆ.
ಇನ್ನೀತರ ಪಾತ್ರಕ್ಕೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಜುನೈದ್ ಖಾನ್ ಎಂಟ್ರಿ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಲು ಕಾದುನೋಡಬೇಕಿದೆ.