ಬೆಂಗಳೂರು: ಕಂಡಕಂಡವರಿಗೆ ನೀತಿ ಹೇಳುವ ಮಂದಿಯಿಂದ ಬಿಗ್ ದೋಖಾ ನಡೆದಿದ್ದು, ಸಾವಿರಾರು ಕೋಟಿ ರೂಪಾಯಿಗಳ ವಂಚನೆ ಮಾಡಿದ್ದಾರೆ.
ಜನರಿಗೆ ಮಾದರಿಯಾಗಬೇಕಾದ ಜನಪ್ರತಿನಿಧಿಗಳೇ ಕೋಟಿ ಕೋಟಿ ತೆರಿಗೆ ಕಟ್ಟಿಲ್ಲ. ಜೆಡಿಎಸ್‍ನ ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ ಕೋಟಿ ಕೋಟಿ ರೂ. ತೆರಿಗೆ ಉಳಿಸಿಕೊಂಡಿದ್ದು, ರಿಯಲ್ ಎಸ್ಟೇಟ್ ಕುಬೇರ ಬರೋಬ್ಬರಿ ಕಳೆದ 8 ವರ್ಷದಿಂದ ಆಸ್ತಿ ತೆರಿಗೆ ಕಟ್ಟಿಲ್ಲ. ಕುಪೇಂದ್ರ ರೆಡ್ಡಿ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿ ತೆರಿಗೆ ಕಟ್ಟಬೇಕಿದೆ.
Advertisement
Advertisement
ಮಾಜಿ ಸಚಿವ ಎಂಆರ್ ಸೀತಾರಾಮ್ ಸೋದರ 6 ಮುಕ್ಕಾಲು ಕೋಟಿ ರೂ., ರಾಮಯ್ಯ ರಸ್ತೆ ಆಸ್ತಿಯ ತೆರಿಗೆಯನ್ನು ಎಂ.ಆರ್ ಕೋದಂಡರಾಮ್ ಕಟ್ಟದೇ ಸುಮ್ಮನಿದ್ದಾರೆ. ಇತ್ತ ಮುಖೇಶ್ ಅಂಬಾನಿ ಬೀಗರ ಸಂಬಂಧಿ ಪ್ರಿಮಲ್ ಸಂಸ್ಥೆಯಿಂದಲೂ ಬಿಗ್ ದೋಖವಾಗಿದ್ದು, 9 ವರ್ಷಗಳಿಂದ 49 ಕೋಟಿ ರೂ. ತೆರಿಗೆಯನ್ನು ಪ್ರಿಮಲ್ ಸಂಸ್ಥೆ ಬಾಕಿ ಉಳಿಸಿಕೊಂಡಿದೆ.
Advertisement
Advertisement
ಕೆ.ಜೆ ಜಾರ್ಜ್ ಡಿ.ಕುಪೇಂದ್ರ ರೆಡ್ಡಿ ಗರುಡಚಾರ್
ಬರೀ ಇವರಷ್ಟೇ ಅಲ್ಲದೇ ಬಾಕಿ ಉಳಿಸಿಕೊಂಡ ದೊಡ್ಡವರ ಪಟ್ಟಿ ತುಂಬಾ ದೊಡ್ಡದಿದೆ:
* ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ಶಾಸಕ ಎನ್‍ಎ ಹ್ಯಾರಿಸ್ 3.5 ಕೋಟಿ ರೂ. ಆಸ್ತಿ ತೆರಿಗೆ
* ದೋಸ್ತಿ ಸರ್ಕಾರದ ಸಚಿವ ಕೆ.ಜೆ ಜಾರ್ಜ್ ಕೂಡ 54 ಲಕ್ಷ ರೂ. ಆಸ್ತಿ ತೆರಿಗೆ
* ಎಂಬಸ್ಸಿ ಗ್ರೂಪ್‍ನ ಗಾಲ್ಫ್ ಲಿಂಕ್ಸ್ ಸಾಫ್ಟ್ ವೇರ್ ಪಾರ್ಕ್ ಆಸ್ತಿಗೆ 7 ವರ್ಷದಿಂದ ಕಟ್ಟಿಲ್ಲ ತೆರಿಗೆ
* ಶಾಸಕ ಉದಯ್ ಗರುಡಚಾರ್ ಕಟ್ಟಬೇಕಿದೆ ಸರಿಸುಮಾರು 5 ಕೋಟಿ ರೂ. ಆಸ್ತಿ ತೆರಿಗೆ
* ಗರುಡಾಚಾರ್ ಮಾಲೀಕತ್ವದ ಮವೇರಿಕ್ ಹೋಲ್ಡಿಂಗ್ಸ್ ಆಸ್ತಿಗೆ 7 ವರ್ಷದಿಂದ ಕಟ್ಟಿಲ್ಲ ಟ್ಯಾಕ್ಸ್
* 6 ವರ್ಷಗಳಿಂದ 16 ಕೋಟಿ ರೂ. ಬಾಕಿ ಉಳಿಸಿಕೊಂಡ ಸಲಾರ್ ಪುರಿಯಾ ಕಂಪನಿ
* ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆಪ್ತ ಕೃಷ್ಣನ್ ಒಡೆತನ ನುಜಿವೀಡು ಸೀಡ್ಸ್ ಉಳಿಸಿಕೊಂಡಿದೆ 12 ಕೋಟಿ ರೂ. ಬಾಕಿ
* ದಯಾನಂದ ಸಾಗರ್ ಇನ್ಸ್ ಟಿಟ್ಯೂಟ್ ಕಟ್ಟಬೇಕಿದೆ 1 ಕೋಟಿ 85 ಲಕ್ಷ ರೂ. ಆಸ್ತಿ ತೆರಿಗೆ
ಸರ್ಕಾರಿ ಸಂಸ್ಥೆಗಳೂ ಕೂಡ ಬಿಬಿಎಂಪಿಗೆ ತೆರಿಗೆ ಪಾವತಿಸಿಲ್ಲ:
* ಫುಡ್ ಕಾರ್ಪೋರೆಷನ್ ಆಪ್ ಇಂಡಿಯಾದಿಂದ 51 ಲಕ್ಷ ರೂ. ಆಸ್ತಿ ತೆರಿಗೆ ಬಾಕಿ
* ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಕಟ್ಟಬೇಕಿದೆ 1 ಕೋಟಿ ರೂ. ಆಸ್ತಿ ತೆರಿಗೆ
* ಕೆಎಸ್‍ಆರ್‍ಟಿಸಿ 10 ವರ್ಷದಿಂದ ತೆರಿಗೆ ಕಟ್ಟಿಲ್ಲ. ಆ ಮೊತ್ತ 1 ಕೋಟಿ ರೂ.ಗೂ ಹೆಚ್ಚು
* ಕರ್ನಾಟಕ ಕನ್ಸಲ್ಟೇಷನ್ ಎಂಡಿ ಮತ್ತು ಅಧ್ಯಕ್ಷ ವಸತಿಯ ತೆರಿಗೆ ಬಾಕಿ 1 ಕೋಟಿ 39 ಲಕ್ಷ ರೂ.
* ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಅಂಡ್ ಕಾಮರ್ಸ್ ಕಟ್ಟಬೇಕಿದೆ 48 ಲಕ್ಷ ರೂ.
ಬರೀ ಇಷ್ಟೇ ಅಲ್ಲದೇ ನೂರಾರು ಸರ್ಕಾರಿ ಸಂಸ್ಥೆಗಳೇ ಕೋಟಿ ಕೋಟಿ ತೆರಿಗೆ ಕಟ್ಟಿಲ್ಲ. ಇದರಿಂದ ಬಿಬಿಎಂಪಿ ಆರ್ಥಿಕವಾಗಿ ನೆಲಕಚ್ಚಲು ಕಾರಣವಾಗಿದೆ. ಇದೆಲ್ಲವನ್ನು ಬಿಬಿಎಂಪಿ ಪ್ರಶ್ನೆ ಮಾಡಿದ್ರೆ, ಅವರು ಈಗಾಗಲೇ ತರಿಗೆ ಹಣವನ್ನು ಕಟ್ಟಿದ್ದಾರೆ. ಸರಿಯಾದ ಚಲನ್ ಕೊಟ್ಟಿಲ್ಲ. ಆನ್‍ಲೈನ್‍ನಲ್ಲಿ ಕಟ್ಟಿರುವುದರಿಂದ ಸರಿಯಾದ ರೀತಿಯಲ್ಲಿ ದಾಖಲಾತಿಯನ್ನು ತೋರಿಸುತ್ತಿಲ್ಲ ಎಂದು ಕುಂಟು ನೆಪವನ್ನು ಹೇಳಿದೆ.
ಅಧಿಕಾರಿಗಳೇ ಕೋಟಿ ಕೋಟಿ ತೆರಿಗೆಯನ್ನು ಕಟ್ಟದೇ ಉಳಿಸಿಕೊಂಡಿರುವುದರಿಂದ ಇವರು ರಾಜಕೀಯವಾಗಿ ದೊಡ್ಡವರ ಬೆಂಬಲವನ್ನು ಹೊಂದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews