ರಾಮನಗರ: ತಾಲೂಕಿನ ಕಂಚುಗಾರನಹಳ್ಳಿಯಲ್ಲಿ ನಿಷೇಧಿತ ಕ್ಯಾಟ್‍ಫಿಶ್ ಸಾಕಾಣಿಕಾ ಅಡ್ಡೆಯ ಮೇಲೆ ರಾಮನಗರ ತಹಶೀಲ್ದಾರ್ ರಾಜು ನೇತೃತ್ವದಲ್ಲಿ ಅಧಿಕಾರಗಳ ತಂಡ ದಾಳಿ ನಡೆಸಿದೆ.
ಕಂಚುಗಾರನಹಳ್ಳಿ ಹೊರವಲಯದ ಎಸ್‍ಪಿಆರ್ ತಿಮ್ಮೇಗೌಡ ಎಂಬವರಿಗೆ ಸೇರಿದ ಜಮೀನಿನಲ್ಲಿ ಬರೋಬ್ಬರಿ 38 ಹೊಂಡಗಳಲ್ಲಿ ಕ್ಯಾಟ್‍ಫಿಶ್ ಸಾಕಾಣಿಕೆ ಮಾಡಲಾಗ್ತಿತ್ತು. ಬೆಂಗಳೂರಿನ ರಜಾಕ್‍ಪಾಳ್ಯದ ನಜೀರ್ ಎಂಬವರು ಜಮೀನನ್ನು ಲೀಸ್‍ಗೆ ಪಡೆದು ಹಲವು ವ್ಯಕ್ತಿಗಳ ಜೊತೆ ಸೇರಿ ಹೊಂಡಗಳನ್ನು ನಿರ್ಮಿಸಿ ಕ್ಯಾಟ್‍ಫಿಶ್‍ಗಳನ್ನು ಸಾಕುತ್ತಿದ್ದರು.
Advertisement
Advertisement
ಸ್ಥಳೀಯ ಗ್ರಾಮಸ್ಥರ ದೂರಿನ ಮೇರೆಗೆ ದಾಳಿ ನಡೆಸಿದ ರಾಮನಗರ ತಹಶೀಲ್ದಾರ್ ರಾಜು ಅವರು ಕ್ಯಾಟ್‍ಫಿಶ್ ಅಡ್ಡೆಗಳನ್ನು ತೆರವುಗೊಳಿಸುವಂತೆ, ಅಲ್ಲದೆ ಸಾಕಾಣಿಕೆ ಮಾಡಿರುವ ಕ್ಯಾಟ್‍ಫಿಶ್‍ನ್ನು ನಾಶಗೊಳಿಸುವಂತೆ ಆದೇಶಿಸಿದ್ದರು ನಂತರ ಜೆಸಿಬಿ ಮೂಲಕ ಹೊಂಡಗಳಿಂದ ನೀರನ್ನು ಹೊರಹಾಕಿ ಕ್ಯಾಟ್‍ಫಿಶ್ ಅಡ್ಡೆ ಹೊಂಡಗಳ ಮೇಲೆ ಮಣ್ಣು ಹಾಕುವಂತಹ ಕಾರ್ಯವನ್ನು ನಡೆಸಲಾಯಿತು.
Advertisement
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮೀನ್‍ನ ಮಾಲೀಕರು ಹಾಗೂ ಕ್ಯಾಟ್‍ಫಿಶ್ ಸಾಕಾಣಿಕೆ ಮಾಡುತ್ತಿದ್ದವರ ಮೇಲೆ ಬಿಡದಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.