ಮೈಸೂರು: ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬಂದ ಮೈಸೂರು ಮೇಯರ್‌ಗೆ, ಕಾರ್ಯಕ್ರಮವನ್ನು ನೀವು ಬರುವುದಕ್ಕೂ ಮುಂಚಿತವಾಗಿ ಮುಗಿಸಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮ ಆಯೋಜಕರನ್ನು ಮೇಯರ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
Advertisement
ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಸೈಕಲ್ ಹಾಗೂ ಬೈಕ್ ರ‍್ಯಾಲಿಯಲ್ಲಿ ಮೈಸೂರು ಮೇಯರ್‍ಗೆ ಅಗೌರವ ಸೂಚಿಸಿಲಾಗಿದೆ. ಹೀಗಾಗಿ ಮೇಯರ್ ಸುನಂದಾ ಪಾಲನೇತ್ರ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ನನ್ನನ್ನು ಪದಚ್ಯುತಿಗೊಳಿಸಲು ವಿದೇಶಿ ಸಂಚು ನಡೆದಿದೆ: ಇಮ್ರಾನ್ ಆರೋಪ
Advertisement
Advertisement
ನಡೆದಿದ್ದೇನು?
ಜಾಥಾ ಕಾರ್ಯಕ್ರಮ ಬೆಳಗ್ಗೆ 7ಕ್ಕೆ ನಿಗದಿಯಾಗಿತ್ತು. ಮೇಯರ್‍ಗೆ ಕರೆ ಮಾಡಿದ ಆಯೋಜಕರು 7.30ಕ್ಕೆ ಕಾರ್ಯಕ್ರಮ ಆರಂಭವಾಗುತ್ತೆ. ಅರ್ಧಗಂಟೆ ತಡವಾಗಿ ಬನ್ನಿ ಎಂದು ಹೇಳಿದ್ದಾರೆ. ಮೇಯರ್ ಸರಿಯಾಗಿ 7.30ಕ್ಕೆ ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ಶಾಕ್ ಆಗಿದ್ದಾರೆ. ಏಕೆಂದರೆ ಜಾಥಾ ಆಗಲೇ ಮುಂದೆ ಸಾಗಿತ್ತು. ಇದರಿಂದ ಸಿಡಿಮಿಡಿಗೊಂಡ ಮೇಯರ್ ಅಧಿಕಾರಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.