ಯಾದಗಿರಿ: ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯನ್ನು ಸರ್ಕಾರ ನಿಲ್ಲಿಸಿದೆ. ಆದ್ರೆ ಸರ್ಕಾರದ ಗಮನಕ್ಕೆ ತರದೆ ಅಧಿಕಾರಿಗಳು, ಶಿಕ್ಷಕರ ಹಂತದಲ್ಲಿ ಶಿಕ್ಷಕರ ನಿಯೋಜನೆ ಪದ್ದತಿಯು ಈಗ ಹುಟ್ಟಿದೆ.
ಯಾದಗಿರಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗರಿ-ಗರಿ ನೋಟು ಕೋಟ್ರೆ ಎಲ್ಲಿಬೇಕಾದ್ರು ಶಿಕ್ಷಕರನ್ನ ನಿಯೋಜನೆ ಮಾಡ್ತಾರೆ. ಇದಕ್ಕೆ ಸಾಕ್ಷಿ ನೋಡಿ ಮಲ್ಕಪನಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ರಾಘವೇಂದ್ರ.
Advertisement
Advertisement
ಯಾದಗಿರಿ ತಾಲೂಕಿನ ಆನೂರ(ಕೆ) ಇಂದ ಮಲ್ಕಪನಳ್ಳಿ ಶಾಲೆಗೆ 12/08/2016ರಲ್ಲಿ ಹೆಚ್ಚುವರಿ ವಿಜ್ಞಾನ ಶಿಕ್ಷಕರಾಗಿ ಬಿಇಓ ನೇಮಕವಾಗಿದ್ದರು. ಆದ್ರೆ, ಕರ್ತವ್ಯಕ್ಕೆ ಬಂದು ಮೂರ್ನಾಲ್ಕು ದಿನಗಳಲ್ಲೇ ರಾಘವೇಂದ್ರ ರಜೆ ಮೇಲೆ ತೆರಳಿದ್ದಾರೆ. ಎರಡು ವರ್ಷದಿಂದ ಯಾವ ಶಾಲೆಗೂ ಹೋಗದ ರಾಘವೇಂದ್ರ, ಅಧಿಕಾರಿಗಳಿಗೆ ಬೆಣ್ಣೆ ಹಚ್ಚಿ ಸಂಬಳವನ್ನ ಮಾತ್ರ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾನೆ.
Advertisement
ಯಾದಗಿರಿ ನೂತನ ಬಿಇಓ ರುದ್ರಗೌಡ ಬಂದ ಮೇಲೆ ರಾಘವೇಂದ್ರ ಮೂಲ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಿದ್ದಾರೆ. ಆದ್ರೆ ರಾಘವೇಂದ್ರನಿಗೆ ರಾಜಕಿಯ ಬೆಂಬಲವಿದೆ ಅಂತ ಆದೇಶ ಪತ್ರಕ್ಕೆ ಕ್ಯಾರೆ ಎಂದಿಲ್ಲ ಅನ್ನೋ ಆರೋಪ ವ್ಯಕ್ತವಾಗಿದೆ.