– ವಿವಿಧೆಡೆ ಪ್ರತ್ಯೇಕ ತಂಡದಿಂದ ತಲಾಶ್
ಬೆಂಗಳೂರು: ಸರ್ಕಾರಿ ಅಧಿಕಾರಿ ಪ್ರತಿಮಾ ಮರ್ಡರ್ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ತಂಡವನ್ನು ರಚಿಸಿದ್ದಾರೆ. 6 ಸ್ಪೆಷಲ್ ಟೀಂ 60 ಮಂದಿ ಪೊಲೀಸ್ ಹಾಗೂ ಅಧಿಕಾರಿಗಳಿಂದ ಆರೋಪಿಗಾಗಿ ತಲಾಶ್ ಮಾಡಲಾಗುತ್ತಿದೆ.
2 ಇನ್ಸ್‍ಪೆಕ್ಟರ್, 6 ಸಬ್‍ಇನ್ಸ್ ಪೆಕ್ಟರ್, 30ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯಿಂದಿ ಹುಡುಕಾಟ ನಡೆಸಲಾಗ್ತಿದೆ. ಕೊಲೆ ಮಾಡಿರೋ ಸ್ಥಳದ ದಶದಿಕ್ಕುಗಳಲ್ಲಿಯೂ ಪ್ರತ್ಯೇಕ ತಂಡಗಳಿಂದ ಶೋಧ ಕಾರ್ಯನಡೆಯುತ್ತಿದೆ. ಹಂತಕರು ಬೆಂಗಳೂರು ಬಿಟ್ಟು ಹೋಗದಂತೆ ಚಕ್ರವ್ಯೂಹ ಹೆಣೆಯಲಾಗಿದೆ.
Advertisement
Advertisement
ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಪರಿಚಯಸ್ಥರಿಂದಲೇ ಕೊಲೆ ನಡೆದಿರೋದು ಖಚಿತವಾಗಿದೆ. ಕೊಲೆಯಾದ ಪ್ರತಿಮ ಕೊನೆಯಾದಾಗಿ ಮಗನಿಗೆ ಕರೆ ಮಾಡಿ ಮಾತನಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಪೊಲೀಸರು ಬೇರೆ ಎಲ್ಲ ಫೋನ್ ಕರೆಯ ಸಿಡಿಆರ್ ಚೆಕ್ ಮಾಡುತ್ತಿದ್ದಾರೆ. ಯಾರಿಗೆಲ್ಲ ಕರೆ ಮಾಡಲಾಗಿದೆ. ಇದನ್ನೂ ಓದಿ: ಉಪನಿರ್ದೇಶಕಿ ಹತ್ಯೆ ಪ್ರಕರಣ- ವಿಚ್ಛೇದನ ಪಡೆದಿದ್ರಿಂದ ಬೆಂಗಳೂರಲ್ಲಿ ಒಂಟಿಯಾಗಿದ್ದರು ಪ್ರತಿಮಾ
Advertisement
Advertisement
ಅತಿ ಹೆಚ್ಚು ಯಾವ ನಂಬರಿಗೆ ಕರೆ ಹೋಗಿದೆ. ಇತ್ತೀಚೆಗೆ ಬಂದಿರುವ ಕರೆ ಯಾವುದು ಎನ್ನುವುದರ ತನಿಖೆ ಬಗ್ಗೆ ತಡಕಾಟ ನಡೆಯುತ್ತಿದೆ. ಪ್ರತಿಮಾ ಮನೆಯ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿಗಳ ಪರಿಶೀಲನೆ, ಕೊಲೆಯಾದ ಅಪಾರ್ಟ್ ಮೆಂಟ್ ಸುತ್ತಮುತ್ತ ಅರ್ಥ ಕಿಲೋಮೀಟರ್ ಅಷ್ಟು ದೂರ ಯಾವುದೇ ಸಿಸಿಟಿವಿಗಳ ಪರಿಶೀಲನೆಗೆ ಇಳಿಯಲಾಗಿದೆ.