ವಾಷಿಂಗ್ಟನ್: ಕಾಫಿ ಮೇಕರ್‍ನಲ್ಲಿ ಗ್ಲಾಸ್ ಕ್ಲೀನರ್ ಮತ್ತು ಪಾತ್ರೆ ತೊಳೆಯುವ ಸೋಪ್ ಹಾಕಿ ಸಹೋದ್ಯೋಗಿಗಳ ಅನಾರೋಗ್ಯಕ್ಕೆ ಕಾರಣವಾದ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಮೆರಿಕದ ವರ್ಜೀನಿಯಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. 33 ವರ್ಷದ ಮೇಯ್ಡಾ ರಿವೇರಾ ಜುವಾರೆಝ್ ಶಿಕ್ಷೆಗೆ ಒಳಗಾಗಿರುವ ಮಹಿಳೆ. ಕಳೆದ ಫೆಬ್ರವರಿಯಲ್ಲಿ ಈಕೆಯ ಮೇಲಿನ ಆರೋಪ ಸಾಬೀತಾಗಿತ್ತು.
Advertisement
ವಕೀಲರು ಹೇಳುವ ಪ್ರಕಾರ ಸ್ಟೆರ್ಲಿಂಗ್‍ನಲ್ಲಿರುವ ಜೆಎಎಸ್ ಫಾರ್ವಡಿಂಗ್ ವಲ್ರ್ಡ್‍ವೈಡ್ ನಲ್ಲಿ 2016ರ ಜನವರಿ ಯಲ್ಲಿ ಕೆಲಸಗಾರರಿಗೆ ಹೊಟ್ಟೆ ನೋವು ಹಾಗೂ ವಾಂತಿಯಾಗುವುದು ಶುರುವಾಗಿತ್ತು. ಅಕ್ಟೋಬರ್‍ನಲ್ಲಿ ಯಾರೋ ಕಾಫಿಯಲ್ಲಿ ಏನನ್ನೋ ಬೆರೆಸುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ಹೀಗಾಗಿ ವಿಚಾರಣೆ ನಡೆದು ಕಚೇರಿಯ ಸೂಪರ್‍ವೈಸರ್ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದರು. ಆಗ ಮೇಯ್ಡಾ ಕಾಫಿ ಮೇಕರ್‍ಗೆ ಗ್ಲಾಸ್ ಕ್ಲೀನರ್ ಬೆರೆಸುತ್ತಿದ್ದುದು ಬಹಿರಂಗವಾಗಿತ್ತು.
Advertisement
Advertisement
ಮೇಯ್ಡಾ ತನ್ನ ಬಾಸ್‍ಗೆ ಅನಾರೋಗ್ಯವಾಗಲಿ ಎಂಬ ಕಾರಣದಿಂದ ಈ ರೀತಿ ಮಾಡಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement
ಮೇಯ್ಡಾ ಕೂಡ ಕಾಫಿ ಮೇಕರ್‍ನಲ್ಲಿ ಸೋಪ್ ಹಾಕಿದ್ದನ್ನು ಹಾಗೆ ಒಂದು ಬಾರಿ ನೇರವಾಗಿ ತನ್ನ ಬಾಸ್‍ನ ಕಾಫಿ ಕಪ್‍ನಲ್ಲಿ ಸೋಪ್ ಹಾಕಿದ್ದನ್ನು ಒಪಿಕೊಂಡಿದ್ದಾಳೆ.