ಬೆಳಗಾವಿ: ಸೋಶಿಯಲ್ ಮೀಡಿಯಾದಲ್ಲಿ ವೀರ ಮದಕರಿ ನಾಯಕನ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚನೆ ಮಾಡಿದ್ದಾರೆ.
ಬೆಳಗಾವಿ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ಅಭಿಜಿತ್ ಬೈಕೇರಿಕರ್ ಕ್ಷಮಾಪಣೆ ಕೇಳಿದ್ದಾರೆ. ಪ್ರಕರಣದ ಹಿನ್ನೆಲೆ ನೋಡೋದಾದ್ರೆ ಬೆಳಗಾವಿ ನಗರದ ಆರ್‌ಪಿಡಿ ವೃತ್ತಕ್ಕೆ ವೀರ ಮದಕರಿ ನಾಯಕರ ಹೆಸರಿಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿದ್ದವು.
Advertisement
Advertisement
ನಡೆದಿದ್ದೇನು?
ಈ ಸಂದರ್ಭದಲ್ಲಿ ಪ್ರೊಫೆಸರ್ ಅಭಿಜಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬೆಳಗಾವಿಗೂ ವೀರಮದಕರಿ ನಾಯಕರಿಗೂ ಸಂಬಂಧ ಏನು? ಅಂತಾ ಪ್ರಶ್ನೆ ಮಾಡಿದ್ದರು. ಪ್ರೊಫೆಸರ್ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿತ್ತು. ‘Remove_Abhijeet’ ಹ್ಯಾಷ್‍ಟ್ಯಾಗ್‍ನಲ್ಲಿ ನೆಟ್ಟಿಗರು ಅಭಿಯಾನ ಆರಂಭಿಸಿದ್ದರು. ಇದನ್ನೂ ಓದಿ: ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಹತ್ತಕ್ಕೂ ಹೆಚ್ಚು ಜನರಿಗೆ ಗಾಯ
Advertisement
Advertisement
ಅಭಿಜಿತ್ ಅವರ ವಿರುದ್ಧ ಕ್ರಮಕ್ಕೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಆಗ್ರಹ ಮಾಡಿತ್ತು. ಈ ಸಂಬಂಧ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾಗಿ ಸಂಘಟನೆ ಸದಸ್ಯರು ಮನವಿ ಮಾಡಿಕೊಂಡಿದ್ದರು. ಇತ್ತ ಸಂಘಟನೆ ಒತ್ತಾಯದ ಬೆನ್ನಲ್ಲೇ ಅಭಿಜಿತ್ ಬೈಕೇರಿಕರ್ ಕ್ಷಮೆಯಾಚಿಸಿದ್ದಾರೆ.