ಕೊಪ್ಪಳ: ಮಾನವೀಯತೆ ಇದ್ದವರಿಗೆ ಸಹಜವಾಗಿ ಕಣ್ಣೀರು ಬರುತ್ತದೆ. ಕಲ್ಲು ಹೃದಯಿಗಳಿಗೆ ಬರೋದಿಲ್ಲ. ಸಾಕಷ್ಟು ಕೆಲಸ ಮಾಡಿದ್ರೂ ಟೀಕೆ ಬಂದಾಗ ಮನೋಸಹಜವಾಗಿ ಕಣ್ಣೀರು ಬರುತ್ತೆ ಎಂದು ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟರಾವ್ ನಾಡಗೌಡ ಅವರು ಕಾಂಗ್ರೆಸ್ ಶಾಸಕ ಸುಧಾಕರ್ ಗೆ ಟಾಂಗ್ ಕೊಟ್ಟಿದ್ದಾರೆ.
ಜೆಡಿಎಸ್ ಶಾಸಕರಿಗೆ ಅನುದಾನ ನೀಡಬಾರದು ಎಂಬ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿಕೆ ವಿಚಾರದ ಕುರಿತು ಗಂಗಾವತಿಯಲ್ಲಿ ಮಾತನಾಡಿದ ಅವರು, ಅನ್ಸಾರಿ ಬೇಕಾದ್ದನ್ನು ಹೇಳಬಹುದು. ಎಲ್ಲ ಪಕ್ಷದ ಶಾಸಕರಿಗೂ ಅಗತ್ಯ ಅನುದಾನ ನೀಡುವುದು ಜವಾಬ್ದಾರಿಯುತ ಸರ್ಕಾರದ ಕೆಲಸವಾಗಿದೆ. ಅನುದಾನ ತರುವ ಧಮ್ ನಮಗಿದೆ ಅಂತ ಹೇಳಿದ್ರು. ಇದನ್ನೂ ಓದಿ: ಕುಮಾರಸ್ವಾಮಿಗೆ ಕಾಂಗ್ರೆಸ್ ವಿಷ ಕೊಟ್ಟಿಲ್ಲ, ಅಮೃತವನ್ನೇ ಕೊಟ್ಟಿದೆ: ಕೈ ಶಾಸಕ
ಎಲ್ಲ ಭಾಗದಲ್ಲಿ ಪಶು ಆಸ್ಪತ್ರೆ ಮೇಲ್ದರ್ಜೆಗೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ರಾಯಚೂರಿನಲ್ಲಿ ಪಶು ಸಂಗೋಪನೆ ಇಲಾಖೆ ಡಿವಿಜನಲ್ ಆಫೀಸ್ ಆತಂಭಿಸಲಾಗುವುದು. ನಮ್ಮ ಭಾಗದಲ್ಲಿ ಪಶು ವೈದ್ಯರ ಕೊರತೆ ಇರುವ ಬಗ್ಗೆ ಮಾಹಿತಿ ಇದೆ. 150 ಖಾಲಿ ಹುದ್ದೆಗೆ ಅರ್ಜಿ ಕರೆದಿದ್ದು, ಕೇವಲ 60 ವೈದ್ಯರು ದಾಖಲಾತಿ ಪರಿಶೀಲನೆಗೆ ಬಂದಿದ್ದಾರೆ. ರೈತರಿಗೆ ತೊಂದರೆ ಆಗದಂತೆ ಎರಡು ಬೆಳೆಗೆ ನೀರು ಬಿಡುವ ಬಗ್ಗೆ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಅಂದ್ರು. ಇದನ್ನೂ ಓದಿ: ನಾನು ವಿಷಕಂಠ ಎಂಬ ಸಿಎಂ ಮಾತಿಗೆ ಮಾಜಿ ಸಚಿವ ಎ.ಮಂಜು ತಿರುಗೇಟು
ಸಾಲ ಮನ್ನಾದ ಹೊರೆ ಭರಿಸಲು ತೆರಿಗೆ ಏರಿಕೆ ಅನಿವಾರ್ಯವಾಗಿದೆ. ಎಲ್ಲ ಸರ್ಕಾರಗಳು ಇದನ್ನೇ ಮಾಡಬೇಕು. ಹಣ ಪ್ರಿಂಟ್ ಮಾಡಿ ತರೋದಕ್ಕೆ ಆಗಲ್ಲ ಅಂತ ಅವರು ಹೇಳಿದ್ರು. ಇದನ್ನೂ ಓದಿ: ಸಿಎಂ ನಟ ಭಯಂಕರ, ತಮ್ಮ ನಟನೆಯಿಂದ ಜನರನ್ನು ಮೂರ್ಖರನ್ನಾಗಿಸ್ತಿದ್ದಾರೆ: ಬಿಜೆಪಿ