ಮಂಗಳೂರು: ಬಿಜೆಪಿ ವಿಜಯೋತ್ಸವದ ಬಳಿಕ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಕೊಣಾಜೆ ಪೊಲೀಸರು (Konaje Police) ವಕ್ಕೆ ಪಡೆದಿದ್ದಾರೆ.
ಘಟನೆ ಮುನ್ನ ಬೋಳಿಯಾರಿನಲ್ಲಿ ನಡೆದ ಗಲಾಟೆ ದೃಶ್ಯ ಲಭ್ಯವಾಗಿದೆ. ವೀಡಿಯೋದಲ್ಲಿ ಮೆರವಣಿಗೆ ವೇಳೆ ಬೈಕ್‍ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು, ಬೋಲೋ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದ್ದಾರೆ. ಈ ವೇಳೆ ಕೆಲ ಯುವಕರು ಬೈಕ್‍ನಲ್ಲಿದ್ದ ಮೂವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಬಳಿಕ ಬಾರ್ ಮುಂಭಾಗ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದಾರೆ.
ಚೂರಿ ಇರಿತದಲ್ಲಿ ಹರೀಶ್ (41) ಹಾಗೂ ನಂದಕುಮಾರ್(24) ಗಾಯಗಳಾಗಿದ್ದು, ಮತ್ತೊಬ್ಬ ಕೃಷ್ಣ ಕುಮಾರ್ ಗೆ ಯುವಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಸದ್ಯ ಹಲ್ಲೆ ಮಾಡಿದ ಮೂವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ವಿಜಯೋತ್ಸವದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ- ಇಬ್ಬರಿಗೆ ಚಾಕು ಇರಿತ