ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಹೇಮಾನಂದ ಬಿಸ್ವಾಲ್(82) ನಿಧನರಾಗಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಹೇಮಾನಂದ ಬಿಸ್ವಾಲ್ ಅವರು ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಅವರ ಪುತ್ರಿ ಸುನೀತಾ ತಿಳಿಸಿದ್ದು, ಸಬಿತಾ, ಸಂಜುಕ್ಯ, ಮಂಜಿಯುಲತಾ, ಸುನೀತಾ ಮತ್ತು ಅನಿತಾ ಎಂಬ ಐವರು ಪುತ್ರಿಯರನ್ನು ಬಿಸ್ವಾಲ್ ಅಗಲಿದ್ದಾರೆ.
Advertisement
Advertisement
ಹೇಮಾನಂದ ಬಿಸ್ವಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಒಡಿಶಾ ಸಿಎಂ ಹೇಮೇಂದ್ರ ಬಿಸ್ವಾಲ್ ಅವರ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ. ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು ಮತ್ತು ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಕಲಬುರಗಿಯ ಐವರು ವಿದ್ಯಾರ್ಥಿಗಳು
Advertisement
Anguished by the passing away of former Odisha CM Shri Hemananda Biswal Ji. He was active in public life for many years and worked extensively among people. In this sad hour, my thoughts are with his family and supporters. Om Shanti.
— Narendra Modi (@narendramodi) February 25, 2022
Advertisement
ಬಿಸ್ವಾಲ್ ಅವರು ಸುಂದರ್‌ಗಢ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು ಮತ್ತು ಝಾರ್ಸುಗುಡ ಜಿಲ್ಲೆಯಿಂದ ಆರು ಬಾರಿ ಶಾಸಕರಾಗಿದ್ದರು. ಜೊತೆಗೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ಮೊದಲ ಬಾರಿಗೆ 1989ರ ಡಿಸೆಂಬರ್ 7ರಿಂದ 1990ರ ಮಾರ್ಚ್ 5 ರವರೆಗೆ ಮತ್ತು 1999ರ ಡಿಸೆಂಬರ್ 6 ರಿಂದ 2000ರ ಮಾರ್ಚ್ 5ರವರೆಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅಲ್ಲದೇ ಅವರು ಒಡಿಶಾದ ಮೊದಲ ಬುಡಕಟ್ಟು ಮುಖ್ಯಮಂತ್ರಿಯಾಗಿದ್ದರು.
My heartfelt condolences to the family and friends of Shri Hemananda Biswal ji.
He was a stalwart of the Congress Party and would be remembered as a great tribal leader. pic.twitter.com/wNFJ1mDArj
— Rahul Gandhi (@RahulGandhi) February 25, 2022
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಹೇಮಾನಂದ ಬಿಸ್ವಾಲ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರು ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರಾಗಿದ್ದರು ಮತ್ತು ಶ್ರೇಷ್ಠ ಬುಡಕಟ್ಟು ನಾಯಕರಾಗಿ ಸ್ಮರಿಸಲ್ಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ