ಇನ್ಸ್ಟಾದಲ್ಲಿ ಬೆಂಗಳೂರಿಗರ ಬಗ್ಗೆ ನಾಲಗೆ ಹರಿಬಿಟ್ಟ ಒಡಿಶಾ ಯುವತಿ

Public TV
1 Min Read
Social Media Influrncer

ಬೆಂಗಳೂರು: ಬೆಂಗಳೂರಿಗರ ಬಗ್ಗೆ ಅನ್ಯರಾಜ್ಯದ ಯುವತಿ ನಾಲಗೆ ಹರಿಬಿಟ್ಟಿದ್ದು, ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿದ್ದಾಳೆ.

ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಆಗಿರುವ ನೇಹಾ ಬಿಸ್ವಾಲ್ ಎಂಬ ಒಡಿಶಾ  (Odisha) ಮೂಲದ ಯುವತಿ, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾಳೆ. ರಸ್ತೆಯಲ್ಲಿ ನಡೆದುಕೊಂಡು ಆಫೀಸ್‌ಗೆ ಹೋಗುವಾಗ, ಯಾರೋ ಒಬ್ಬ ಕಾರು ಚಾಲಕ ವೇಗವಾಗಿ ಹೋದ ಪರಿಣಾಮ ರಸ್ತೆಯಲ್ಲಿದ್ದ ನೀರು ಯುವತಿಯ ಮೇಲೆ ಎರಚಿತ್ತು. ಇದನ್ನೂ ಓದಿ: Mysuru | ಸಿಡಿಮದ್ದು ಸ್ಫೋಟ – ಮಹಿಳೆಗೆ ಗಾಯ

ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗದೇ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಯು, ನೀರು ಎರಚಿರೋದನ್ನ ರೀಲ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್‌ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ

ಈ ರೀಲ್ಸ್‌ನಲ್ಲಿ ಬೆಂಗಳೂರಿನಲ್ಲಿ ಇರುವ ಜನರಿಗೆ ಶಿಕ್ಷಣ ಇದೆ. ಆದ್ರೆ ಅರ್ಥ ಮಾಡಿಕೊಳ್ಳುವ ಬುದ್ಧಿ ಇಲ್ಲ. ಇಷ್ಟು ಚೂ* ಜನ ಇದ್ದಾರೆ. ಇಷ್ಟು ಮಳೆ ಬರುತ್ತಿರುವಾಗ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವೇಗವಾಗಿ ಕಾರು ಚಾಲನೆ ಮಾಡಿದ್ದರಿಂದ ರಸ್ತೆಯಲ್ಲಿದ್ದ ನೀರು ನನ್ನ ಬಾಯಿಗೆ ಹೋಯಿತು. ಆ ಚ್ಯೂ*ನ ನೋಡಿ, ಈ ಕಾರನ್ನು ನೋಡಿ. ನೀರು ಹೇಗೆ ನನ್ನ ಮೇಲೆ ಬಿದ್ದಿದೆ ನೋಡಿ. ನನಗೆ ಅಳು, ಸಿಟ್ಟು ಎರಡೂ ಬರುತ್ತಿದೆ. ಥೂ.. ಇಷ್ಟು ಅನಕ್ಷರಸ್ಥರು ಇದ್ದಾರೆ. ನಿಮ್ಮಿಂದ ನಾವು ರಸ್ತೆಯಲ್ಲಿ ನಡೆದಾಡಬಾರದಾ? ಛೀ.. ಎಂದು ರೀಲ್ಸ್‌ನಲ್ಲಿ ಬೆಂಗಳೂರಿಗರಿಗೆ ಬೈದು ಅವಮಾನ ಮಾಡಿದ್ದಾಳೆ. ಇದನ್ನೂ ಓದಿ: Rajasthan | ಶಾಲಾ ಮೇಲ್ಛಾವಣಿ ಕುಸಿದು 7 ವಿದ್ಯಾರ್ಥಿಗಳು ಸಾವು – ಐವರು ಶಿಕ್ಷಕರ ಅಮಾನತು

ಬೆಂಗಳೂರಲ್ಲಿರೋರು ಅನಕ್ಷರಸ್ಥರೆಂದು ಯುವತಿ ಆರೋಪಿಸಿದ್ದು, ಆಕೆಯ ಮಾತಿಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Share This Article