ಭುವನೇಶ್ವರ: ಒಡಿಶಾ (Odisha Train Tragedy) ರೈಲು ಅಪಘಾತ ಸಂಭವಿಸಿದ ನಂತರ ಈ ದುರಂತ ಕುರಿತು ನಾನಾ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ದುರಂತಕ್ಕೂ ಮುಂಚೆ ರೆಕಾರ್ಡ್ ಮಾಡಲಾಗಿದ್ದು ಎನ್ನಲಾದ ವೀಡಿಯೋ ವೈರಲ್ ಆಗಿದೆ.
Advertisement
ದುರಂತಕ್ಕೀಡಾದ ರೈಲೊಂದರ ಜನರಲ್ ಬೋಗಿಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ರೈಲು ದುರಂತ ಸಂಭವಿಸಿದಾಗ ಅಪಾರ ಪ್ರಮಾಣದಲ್ಲಿ ಸಾವು-ನೋವಾಗಲು ಇದೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?
Advertisement
Advertisement
ದುರಂತಕ್ಕೀಡಾದ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಗಳು ಫುಲ್ ರಶ್ ಆಗಿದ್ದವು. ಪ್ರಯಾಣದ ವೇಳೆ ಫುಲ್ ರಶ್ ಆದ ವೀಡಿಯೋ ಮಾಡಿಕೊಂಡಿದ್ದ ಕೆಲ ಪ್ರಯಾಣಿಕರು ಅದನ್ನು ತಮ್ಮ ಸ್ನೇಹಿತರು, ಇತರರಿಗೆ ಶೇರ್ ಮಾಡಿದ್ದರು. ಆ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
Advertisement
ಒಡಿಶಾದಲ್ಲಿ 3 ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇದುವರೆಗೆ 288 ಮಂದಿ ಮೃತಪಟ್ಟಿದ್ದಾರೆ. 803 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತಕ್ಕೆ ಜಾಗತಿಕ ನಾಯಕರು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ
ಚೆನ್ನೈ-ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲುಗಳ ನಡುವೆ ಶುಕ್ರವಾರ ಸಂಜೆ ಅಪಘಾತ ಸಂಭವಿಸಿತ್ತು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ದುರಂತ ಜರುಗಿತ. 12841 ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ.