ಭುವನೇಶ್ವರ್: ಶಾಲಾ ಶುಲ್ಕವನ್ನು ಪಾವತಿಸದ 34 ವಿದ್ಯಾರ್ಥಿಗಳನ್ನು 5 ಗಂಟೆಗಳ ಕಾಲ ಶಾಲಾ ಗ್ರಂಥಾಲಯದಲ್ಲಿ ಬಂಧಿಸಿದ ಘಟನೆ ಓಡಿಶಾದ ಭುವೇನಶ್ವರ ನಗರದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಶುಲ್ಕ ಪಾವತಿಸದ 3 ರಿಂದ 9 ನೇ ತರಗತಿಯ 34 ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ಬರಲು ಶಿಕ್ಷಕರು ತಿಳಿಸಿದ್ದಾರೆ. ಇದಾದ ನಂತರ ಅಲ್ಲೇ 5 ಗಂಟೆಗಳ ಕಾಲ ಅವರನ್ನು ಬಂಧಿಸಿ ಗ್ರಂಥಾಲಯದ ಕೋಠಡಿಗೆ ಬೀಗ ಹಾಕಿದ್ದಾರೆ.
Advertisement
Advertisement
ಘಟನೆಗೆ ಸಂಬಂಧಿಸಿ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲದೇ ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ ಶಾಲಾ ಅಧಿಕಾರಿಗಳು ಶಾಲಾ ಶುಲ್ಕವನ್ನು ಶೇ. 20ರಷ್ಟು ಹೆಚ್ಚಿಸಿದ್ದಾರೆ ಎಂದು ಪೋಷಕರು ಆರೋಪಿಸಿದರು. ಅಲ್ಲದೆ, ಶಾಲೆಯ ಕ್ರಮದಿಂದ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತೊಂದರೆ ಉಂಟಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಾಸಕ ಪ್ರೀತಂಗೌಡ ಭರ್ಜರಿ ಗಿಫ್ಟ್ – ಗೌರಿ ಹಬ್ಬಕ್ಕೆ ಸೀರೆ, ಬಳೆ, ಕುಂಕುಮ ಭಾಗ್ಯ
Advertisement
Advertisement
ಘಟನೆಗೆ ಸಂಬಂಧಿಸಿ ಭುವನೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಭುವನೇಶ್ವರ ಪೊಲೀಸರು ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಉಪ-ಪ್ರಾಂಶುಪಾಲರು ಮತ್ತು ಆಡಳಿತ ವ್ಯವಸ್ಥಾಪಕರ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೈಕ್, ಬಸ್ ನಡುವೆ ಅಪಘಾತ – ಸವಾರ ಸ್ಥಳದಲ್ಲೆ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ