ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಊರಿಡೀ ಸುತ್ತಿದ

Public TV
1 Min Read
Police Jeep

ಭುವನೇಶ್ವರ: ಮಲವಿಸರ್ಜನೆಗೆ ತೆರಳಿದ್ದ 8 ವರ್ಷದ ಬಾಲಕಿಯ ತಲೆ ಕಡಿದು, ರುಂಡದೊಂದಿಗೆ ಊರಿಡೀ ತಿರುಗಾಡಿದ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯ, ಮಾನಕಿರಾ ಮಂಡಲದ ಗ್ರಾಮದಲ್ಲಿ ನಡೆದಿದೆ.

8 ವರ್ಷದ ಬಾಲಕಿ ಮೃತಳಾಗಿದ್ದಾಳೆ. ಈಕೆಯ ತಲೆಯನ್ನು ಕತ್ತರಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?: ಬಾಲಕಿ ಬೆಳಿಗ್ಗೆ ಮಲವಿಸರ್ಜನೆಗೆಂದು ಹೊಲಕ್ಕೆ ಹೋಗಿದ್ದಳು. ಈ ವೇಳೆ ಅಲ್ಲಿ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ನಿಂತಿದ್ದನು. ಆಕೆ ನೋಡಿದವನೆ ಆಕೆಯ ಹತ್ತಿರಕ್ಕೆ ಬಂದು ತಲೆ ಕಡಿದು ಕೊಡಲಿಯಿಂದ ಕತ್ತರಿಸಿಬಿಟ್ಟಿದ್ದಾನೆ. ನಂತರ ತುಂಡರಿಸಿದ ತಲೆಯನ್ನು ಹೊತ್ತು ಊರೆಲ್ಲ ಸುತ್ತಿದ್ದಾನೆ. ಆರೋಪಿ ಪತ್ನಿ ಕೈಯಲ್ಲಿ ತುಂಡರಿಸಿದ ತಲೆಯನ್ನು ಕಂಡಾಗ ಆತನೊಂದಿಗೆ ಜಗಳವಾಡಿದ್ದಾಳೆ. ಆದರೆ ಅವನು ಕೊಡಲಿಯಿಂದ ಹೆಂಡತಿಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಆರೋಪಿ ಅಲ್ಲೇ ನೆಲದ ಮೇಲೆ ಮಲಗಿ ನಿದ್ದೆಗೆ ಜಾರಿದ್ದಾನೆ. ಇದನ್ನೂ ಓದಿ: Galwan Clash ಚೀನಾದ ಸುಳ್ಳು ಬಯಲು – 38 ಪಿಎಲ್‌ಎ ಯೋಧರು ಸಾವು – ಭಾರತದ ಸೇನೆಗೆ ಹೆದರಿ ಪರಾರಿಯಾದ ಚೀನಿ ಸೈನಿಕರು

police web

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಆತ ಮಾದಕ ವ್ಯಸನಿ, ಆದರೆ ಬುದ್ಧಿ ಮಾಂದ್ಯನಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಅಪರಾಧವನ್ನು ಮಾಡುವಾಗ ಅವನ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ಖಚಿತವಾಗಿಲ್ಲ. ಆದರೆ ಈತನಿಗೆ ಮತ್ತು ಕೊಲೆಯಾದ ಬಾಲಕಿ ಕುಟುಂಬಕ್ಕೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಮಾನಕಿರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌  ಪ್ರೇಮ್‍ಜಿತ್ ದಾಸ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *