ಪುರಿ: ಯುವತಿಯೊಬ್ಬಳನ್ನು 12ಕ್ಕೂ ಹೆಚ್ಚು ಮಂದಿ ಕಾಮುಕರು ಸುಮಾರು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ದಾರುಣ ಘಟನೆಯೊಂದು ನಡೆದಿದೆ.
ಈ ಘಟನೆ ಒಡಿಶಾದ ಪುರಿ ಜಿಲ್ಲೆಯ ಕೋನಾರ್ಕ್ ಪ್ರದೇಶದಲ್ಲಿ ನಡೆದಿದೆ. ಯುವತಿ ಕೋಲ್ಕತ್ತಾ ನಿವಾಸಿ ಎನ್ನಲಾಗುತ್ತಿದ್ದು, ಕೆಲಸ ಹುಡುಕಿಕೊಂಡು ಒಡಿಶಾಗೆ ತೆರಳಿದ್ದಳು ಎಂಬುದಾಗಿ ವರದಿಯಾಗಿದೆ.
Advertisement
Advertisement
ಒಡಿಶಾದಲ್ಲಿ ಪ್ರಸಿದ್ಧ ಸೂರ್ಯ ದೇವಾಲಯದಿಂದ 2 ಕಿಲೋಮೀಟರ್ ದೂರದಲ್ಲಿರುವ ಮಾರ್ಕೆಟ್ ಕಾಂಪ್ಲೆಕ್ಸ್ ನ ಕೊಠಡಿಯೊಂದರಲ್ಲಿ ಯುವತಿಯನ್ನು ಕೂಡಿ ಹಾಕಿ ಕೃತ್ಯ ಎಸಗಲಾಗಿದೆ.
Advertisement
ಕೊಠಡಿಯ ಛಾವಣಿಯ ಮೂಲಕ ಬಂಧಿತಳಾದ ಯುವತಿ ಸಹಾಯಕ್ಕಾಗಿ ಸ್ಥಳೀಯರ ಬಳಿ ಅಂಗಲಾಚಿದ್ದಾಳೆ. ಇದರಿಂದ ಕೂಡಲೇ ಎಚ್ಚೆತ್ತ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವೇಳೆ ನಡೆದ ಘಟನೆ ಬೆಳಕಿಗೆ ಬಂದಿದೆ.
Advertisement
ಸಾರ್ವಜನಿಕರಿಂದ ಮಾಹಿತಿ ಪಡೆದ ಪೊಲೀಸರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆ ಸ್ಥಳಕ್ಕೆ ದೌಡಾಯಿಸಿ ಕೊಠಡಿಯ ಬಾಗಿಲು ಒಡೆದು ಯುವತಿಯನ್ನು ರಕ್ಷಿಸಿದ್ದಾರೆ. ಈ ವೇಳೆ ಯುವತಿ ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಇನ್ನು ಕಾಲಹರಣ ಮಾಡುವುದು ಸರಿಯಲ್ಲ ಅಂತ ತಿಳಿದು ತಕ್ಷಣವೇ ಯುವತಿಯನ್ನು ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅಲ್ಲಿಂದ ಪುರಿಯಲ್ಲಿರೋ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಕಳುಹಿಸಿದ್ದಾರೆ. ನಂತರ ಅಲ್ಲಿ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಹುಡುಗಿಯೊಬ್ಬಳು ನನ್ನ ಬಳಿ ಬಂದು ಕೆಲಸ ಹುಡುಕಿ ಕೊಡುವುದಾಗಿ ಭರವಸೆ ನೀಡಿದ್ದಳು. ಅಲ್ಲದೇ ಸ್ವಲ್ಪ ದಿನಗಳ ಕಾಲ ನೀನು ಲಾಡ್ಜ್ ನಲ್ಲಿರಬೇಕು ಅಂತ ಹೇಳಿದಳು. ನಂತರ ಆಕೆ ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ. ಆಕೆ ಸುಭಾಷ್, ಕೃಷ್ಣ ಹಾಗೂ ರಾಜು ಮತ್ತಿತರ ಜೊತೆ ಸೇರಿಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಳು. ಹೀಗಾಗಿ ಆಕೆ ನನ್ನನ್ನು ಯಾರಿಗೂ ತಿಳಿಯದಂತೆ ಒಡಿಶಾಕ್ಕೆ ಕರೆತಂದಿದ್ದಾಳೆ. ಅಂತ ಯುವತಿ ನಡೆದ ಘಟನೆಯನ್ನು ಪೊಲೀಸರ ಬಳಿ ವಿವರಿಸಿದ್ದಾಳೆ.
ಸದ್ಯ ಯುವತಿಯ ಹೇಳಿಕೆಯಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv