ಭುವನೇಶ್ವರ: ಪತಿ ಪ್ರವಾಸಕ್ಕೆ ಹೋಗಿದ್ದಾಗ ಪತ್ನಿ ಬೇರೆ ವ್ಯಕ್ತಿಯ ಜೊತೆ ಮದುವೆಯಾಗಿದ್ದು, ಈ ಬಗ್ಗೆ ಪತ್ನಿಯ ವಿರುದ್ಧ ಪತಿ ದೂರು ನೀಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಉಕ್ಕಿನ ನಗರವಾದ ರೂರ್ಕೆಲಾದ ಉದ್ಯಮಿಯೊಬ್ಬರು ಬಿಸಿನೆಸ್ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಅವರ ಪತ್ನಿ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ಗುರುವಾರ ನಗರದಲ್ಲಿರುವ ರಘುನಾಥ್ಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ಉದ್ಯಮಿ ಒಂದು ವಾರ ಕೆಲಸದ ನಿಮಿತ್ತ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಅವರು ವಾರಣಾಸಿಯಲ್ಲಿದ್ದಾಗ ತಮ್ಮ ಪತ್ನಿಯ ಮರು ಮದುವೆಯ ವಿಚಾರ ಗೊತ್ತಾಗಿದೆ. 2016ರ ಜುಲೈನಲ್ಲಿ ನಾನು ಮತ್ತು ಬ್ಯಾಂಕರ್ ಮಹಿಳೆಯ ಮದುವೆಯಾಗಿದ್ದಾನೆ ಎಂದು ಮದುವೆ ಪ್ರಮಾಣಪತ್ರವನ್ನು ಸಹ ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ.
Advertisement
Advertisement
ಮಾರ್ಚ್ 4ರಂದು ಉದ್ಯಮಿ ವಾರಣಾಸಿಯಲ್ಲಿದ್ದ ಪತ್ನಿಗೆ ಫೋನ್ ಮಾಡಿದ್ದಾರೆ. ಆದರೆ ಆಕೆ ಫೋನ್ ಸ್ವೀಕರಿಸಲಿಲ್ಲ. ನಂತರ ಅವರು ಆಕೆಯ ತಾಯಿಗೆ ಫೋನ್ ಮಾಡಿದ್ದಾರೆ. ಅವರು ರಿಸೀವ್ ಮಾಡಿ ಮಗಳು ಮದುವೆಯಾಗಿದ್ದಾಳೆ, ರಿಸೆಪ್ಷನ್ ಗೆ ಸಿದ್ಧವಾಗುತ್ತಿದ್ದಾಳೆ ಎಂದು ಹೇಳಿದ್ದಾರೆ.
Advertisement
ಸುದ್ದಿ ತಿಳಿದ ಕೂಡಲೇ ಉದ್ಯಮಿ ವಾರಣಾಸಿಯಿಂದ ಹೊರಟು ರೂರ್ಕೆಲಾಗೆ ಬಂದಿದ್ದು, ಆದರೆ ಪತ್ನಿ ಪೋಷಕರ ಜೊತೆ ವಧುವಿನ ಅವತಾರದಲ್ಲಿ ಬೇರೊಬ್ಬರ ಜೊತೆ ಇದ್ದಿದ್ದನ್ನು ನೋಡಿದ್ದಾರೆ. ನನಗೆ ಮೋಸ ಆಗಿದೆ. ನ್ಯಾಯ ಕೊಡಿಸಿ ಎಂದು ಪೊಲೀಸರನ್ನು ಮನವಿ ಮಾಡಿಕೊಂಡಿದ್ದಾರೆ.
ವಧುವಿನ ತಂದೆ ಮಾತ್ರ ಉದ್ಯಮಿ ಅವಳನ್ನು ವಿವಾಹವಾಗಿರಲಿಲ್ಲ ಎಂದು ನಿರಾಕರಿಸಿದ್ದು, ಆತನು ನಕಲಿ ಮದುವೆ ಪ್ರಮಾಣಪತ್ರವನ್ನು ತಯಾರಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದರು.
ಉದ್ಯಮಿಯ ದೂರಿನ ಮೇಲೆ ಇನ್ನೂ ಎಫ್‍ಐಆರ್ ದಾಖಲಿಸಿಲ್ಲ. ನಾವು ದಾಖಲೆಗಳನ್ನು ಪರಿಶೀಲಿಸುತ್ತೇವೆ. ಪರಿಶೀಲನೆಯ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಘುನಾಥ್ಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆರ್. ಪ್ರಧಾನ್ ಹೇಳಿದ್ದಾರೆ.