ಕಾರವಾರ: (Karwar) ಸಾಗರವಿಲ್ಲದೆ ಪ್ರಪಂಚದ ನೈಸರ್ಗಿಕ ಸೌಂದರ್ಯವು ಅಪೂರ್ಣ. ಆದ್ದರಿಂದ ಸಾಗರವನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವೆಲ್ಲರೂ ಒಗ್ಗೂಡಿ ಶುದ್ಧ ಸಾಗರ, ಸುರಕ್ಷಿತ ಸಾಗರ ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawarchand Gehlot) ಹೇಳಿದರು.
ಕಾರವಾರದಲ್ಲಿ ರವೀಂದ್ರನಾಥ್ ಟ್ಯಾಗೂರ್ ಬೀಚ್ ಬಳಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ನಿಮಿತ್ತ ಉತ್ತರ ಕನ್ನಡ ಜಿಲ್ಲಾಡಳಿತ ಆಯೋಜಿಸಿದ್ದ ಕ್ಲೀನ್ ಸಾಗರ್ – ಸೇಫ್ ಸಾಗರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಭಾರತದ 75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಆಚರಿಸಲಾದ ಅಮೃತ ಮಹೋತ್ಸವದ ಅಂಗವಾಗಿ, ದೇಶಾದ್ಯಂತ 75 ದಿನಗಳ ಕಾಲ 75 ಬೀಚ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕರಾವಳಿ ಸ್ವಚ್ಛತಾ ಅಭಿಯಾನವನ್ನು ಜುಲೈ 3ರಿಂದ ಸೆಪ್ಟೆಂಬರ್ 17ರವರೆಗೆ ಅಂದರೆ 75 ದಿನಗಳ ಕಾಲ ದೇಶದ 75 ಸಮುದ್ರ ತೀರಗಳಲ್ಲಿ ನಡೆಸಲಾಗುತ್ತಿದೆ. ಇದು ಈ ರೀತಿಯ ಮೊದಲನೆ ಮತ್ತು ದೀರ್ಘಾವಧಿಯ ಕರಾವಳಿ ಸ್ವಚ್ಛತಾ ಅಭಿಯಾನವಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿರುವುದು ಶ್ಲಾಘನೀಯ ಎಂದರು. ಇದನ್ನೂ ಓದಿ: ಶಕ್ತಿ, ಸ್ಫೂರ್ತಿ ಸದಾ ನಿಮ್ಮೊಂದಿಗರಲಿ: ಮೋದಿ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್
Advertisement
Advertisement
ಕರಾವಳಿ ಪ್ರದೇಶಗಳು ಸೇರಿದಂತೆ ದೇಶದ ಇತರ ಭಾಗಗಳ ಏಳಿಗೆಗಾಗಿ ʼಸ್ವಚ್ಛ ಸಾಗರ, ಸುರಕ್ಷಿತ ಸಾಗರʼ ಎಂಬ ಸಂದೇಶವನ್ನು ನೀಡಲು, ಜನಸಾಮಾನ್ಯರ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ. ಭಾರತವು ಶ್ರೀಮಂತ ಕಡಲ ಇತಿಹಾಸವನ್ನು ಹೊಂದಿದೆ. ಸಮುದ್ರ ಚಟುವಟಿಕೆಗಳನ್ನು ಋಗ್ವೇದದಲ್ಲಿ ಮತ್ತು ಸಾಗರಗಳು, ಸಮುದ್ರಗಳು ಮತ್ತು ನದಿಗಳ ಪರಸ್ಪರ ಸಂಬಂಧಗಳ ಉಲ್ಲೇಖಗಳು ಭಾರತೀಯ ಪುರಾಣಗಳಲ್ಲಿವೆ. ಭಾರತೀಯ ಸಾಮಾಜಿಕ-ಆಧ್ಯಾತ್ಮಿಕ ಸಂಪ್ರದಾಯಗಳು, ಸಾಹಿತ್ಯ, ಕಾವ್ಯ, ಶಿಲ್ಪಕಲೆ, ಚಿತ್ರಕಲೆ ಮತ್ತು ಪುರಾತತ್ವ ಶಾಸ್ತ್ರದ ವೈವಿಧ್ಯಮಯ ಪುರಾವೆಗಳು ಭಾರತದ ಮಹಾನ್ ಕಡಲ ಸಂಪ್ರದಾಯಗಳನ್ನು ದೃಢೀಕರಿಸುತ್ತವೆ ಎಂದು ಮಾಹಿತಿ ನೀಡಿದರು.
Advertisement
7,500 ಕಿ.ಮೀ.ಗಿಂತಲೂ ಹೆಚ್ಚು ಭಾರತದ ಕರಾವಳಿಯು ನಮ್ಮ ವಿಶಾಲವಾದ ಸಾಗರ ಸಂಪನ್ಮೂಲಗಳನ್ನು ಪ್ರತಿಬಿಂಬಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ಮಹಾಸಾಗರವು ಒಂದು ದೇಶದ ಹೆಸರಿನ ಏಕೈಕ ಸಾಗರವಾಗಿದೆ. ಈ ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕರೂ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಪ್ರಕೃತಿ ರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆನೀಡಿದರು. ಇದನ್ನೂ ಓದಿ: ದಿವಂಗತ ಉಮೇಶ್ ಕತ್ತಿ ನಿವಾಸಕ್ಕೆ ಈಶ್ವರ ಖಂಡ್ರೆ ಭೇಟಿ – ಕುಟುಂಬಸ್ಥರಿಗೆ ಸಾಂತ್ವನ
Advertisement
ಕ್ಲೀನ್ ಸಾಗರ್ – ಸೇಫ್ ಸಾಗರ್ ಸ್ವಚ್ಛತಾ ಅಭಿಯಾನದಲ್ಲಿ ರಾಜ್ಯಪಾಲರು ಭಾಗವಹಿಸಿ ಸಮುದ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.