– ದೈವ ನಿಂದಿಸಿ, ಅವಮಾನಿಸಿದ್ರಾ ಅಧಿಕಾರಿಗಳು
ಮಂಗಳೂರು: ಎಂಎಸ್‌ಇಝಡ್‌ಗಾಗಿ ಕಳೆದ 19 ವರ್ಷಗಳ ಹಿಂದೆ ಸಾವಿರಾರು ಎಕರೆ ಕೃಷಿ ಭೂಮಿ, ಮಠ, ಮಂದಿರ, ಮಸೀದಿ, ಚರ್ಚ್ ಎಲ್ಲವೂ ನಾಶವಾಗಿತ್ತು. ಆದರೆ, 800 ವರ್ಷಗಳ ಇತಿಹಾಸ ಇರುವ ಆ ಒಂದು ದೈವಸ್ಥಾನವನ್ನು ಸ್ಥಳಾಂತರಿಸಲು ಯಾರಿಗೂ ಸಾಧ್ಯವಾಗಿಲ್ಲ. ಅಂದಿನಿಂದ ಇಂದಿನವರೆಗೂ ಆ ದೈವಸ್ಥಾನ ಎಂಎಸ್‌ಇಝಡ್‌ನ ಆವರಣದೊಳಗೆ ಉಳಿದುಕೊಂಡು ಆರಾಧನೆಗೊಳ್ಳುತ್ತಿತ್ತು. ಇದೀಗ ಆ ದೈವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗದಂತೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ.
Advertisement
ತುಳುನಾಡಿನಲ್ಲಿ ದೈವಗಳು ತಮ್ಮ ಇರುವಿಕೆ ಹಾಗೂ ಕಾರ್ಣಿಕವನ್ನು ಆಗ್ಗಾಗ್ಗೆ ತೋರಿಸುತ್ತಲೇ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರು ವಿಶೇಷ ಆರ್ಥಿಕ ವಲಯದ ಆವರಣದಲ್ಲಿ ಕಳೆದ 19 ವರ್ಷಗಳಿಂದ ಆರಾಧನೆಗೊಳ್ಳುತ್ತಿರುವ ನೆಲ್ಲಿದಡಿಗುತ್ತು ಶ್ರೀ ಕಾಂತೇರಿ ಧೂಮಾವತಿ ದೈವ ಇದೆ.
Advertisement
Advertisement
2006ರಲ್ಲಿ ಮಂಗಳೂರು ಹೊರವಲಯ ಬಜಪೆ ಸಮೀಪ ಸುಮಾರು ಎರಡೂವರೆ ಸಾವಿರ ಎಕರೆ ಭೂಮಿಯನ್ನು ಎಂಇಝಢ್‌ಗಾಗಿ ಭೂಸ್ವಾಧೀನ ಮಾಡಲಾಗಿತ್ತು. ಸಾವಿರಾರು ಎಕರೆ ಕೃಷಿ ಭೂಮಿ ಸೇರಿ ಮನೆ, ಮಠ, ಮಂದಿರ, ಮಸೀದಿ, ಚರ್ಚ್ ಧ್ವಂಸ ಮಾಡಿ ಜನರನ್ನು, ದೈವ-ದೇವರನ್ನು ಸ್ಥಳಾಂತರ ಮಾಡಿ ಕೈಗಾರಿಕಾ ವಲಯವನ್ನು ಸ್ಥಾಪಿಸಲಾಗಿತ್ತು. ಆದರೆ, ಅಲ್ಲೇ ಇದ್ದ ನೆಲ್ಲಿದಡಿಗುತ್ತು ಶ್ರೀಕಾಂತೇರಿ ಧೂಮಾವತಿ ದೈವಸ್ಥಾನವನ್ನು ಮಾತ್ರ ಧ್ವಂಸ ಮಾಡಲು, ಸ್ಥಳಾಂತರ ಮಾಡಲು ಯಾರಿಗೂ ಸಾಧ್ಯವಾಗಿಲ್ಲ. ಅದನ್ನು ಮುಟ್ಟಲು ಬಂದಾಗ ದೈವದ ಶಕ್ತಿಯಿಂದಲೇ ದೈವದ ಭೂಮಿ ಹಾಗೂ ದೈವ ಅಲ್ಲೇ ಉಳಿದಿತ್ತು. ಇಡೀ ಊರಿಗೆ ಊರನ್ನೇ ಒಕ್ಕಲೆಬ್ಬಿಸಿದರೂ ಈ ಕಾಂತೇರಿ ಧೂಮಾವತಿ ದೈವವನ್ನು ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೈಗಾರಿಕಾ ಪ್ರದೇಶದ ಒಳಗೇ ಉಳಿದುಕೊಂಡ ದೈವದ ಪೂಜೆ, ಉತ್ಸವ, ನೇಮೋತ್ಸವ ಮಾಡಲಾಗ್ತಿತ್ತು. ಕಳೆದ 19 ವರ್ಷದಿಂದಲೂ ಅನುಮತಿ ಪಡೆದು ದೈವಾರಾಧನೆ ಮಾಡಲಾಗುತ್ತಿತ್ತು. ಆದರೆ, ಇದೀಗ ಅದಕ್ಕೂ ಅಧಿಕಾರಿಗಳು ತಡೆಯೊಡ್ಡಿದ್ದು, ದೈವ ಭಕ್ತರನ್ನು ರೊಚ್ಚಿಗೆಬ್ಬಿಸಿದೆ.
Advertisement
ಪ್ರತಿ ತಿಂಗಳ ಸಂಕ್ರಮಣದಂದು ದೈವದ ಪೂಜೆ ಮಾಡಲು ನೆಲ್ಲಿದಡಿಗುತ್ತಿನ ಕುಟುಂಬಸ್ಥರು ಎಂಎಸ್‌ಇಝಡ್‌ನಿಂದ ಒಳ ಹೋಗುವ ಅನುಮತಿ ಪಡೆಯುತ್ತಿದ್ದರು. ನೇಮೋತ್ಸವ ನಡೆಯುವಾಗಲೂ ಅನುಮತಿ ಪಡೆದು ನಡೆಸುತ್ತಿದ್ದರು. ಅಧಿಕಾರಿ, ಸಿಬ್ಬಂದಿ ಕೂಡ ಭಾಗಿಯಾಗುತ್ತಿದ್ದರು. ಕಳೆದ 19 ವರ್ಷದಿಂದ ಇದು ನಡೆಯುತ್ತಿದ್ದರೂ, ಇದೀಗ ಬಂದ ಅಧಿಕಾರಿಗಳು ಆರ್ಥಿಕ ವಲಯದ ಆವರಣಕ್ಕೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ. ಕಳೆದ ಸಂಕ್ರಮಣದಲ್ಲಿ ದೈವಾರಾಧನೆಗೆ ಅಡ್ಡಿಪಡಿಸಿದ್ದಾರೆ. ಇದು ತುಳುನಾಡಿನ ದೈವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.