ನವದೆಹಲಿ: ಸೋಮವಾರದಿಂದ ವಿಧಾನಮಂಡಲ (Karnataka Assembly Session) ಅಧಿವೇಶನ ಶುರುವಾಗುತ್ತಿದ್ದರೂ ಬಿಜೆಪಿ (BJP) ಈವರೆಗೂ ವಿಪಕ್ಷ ನಾಯಕನನ್ನು (Opposition Leader) ಆಯ್ಕೆ ಮಾಡಲು ಆಗಿಲ್ಲ. ಯಾರನ್ನು ಆಯ್ಕೆ ಮಾಡಿದರೆ ಚೆನ್ನಾಗಿರುತ್ತದೆ ಎಂಬ ಬಗ್ಗೆ ಎಂಬ ಬಗ್ಗೆ ಯಡಿಯೂರಪ್ಪ (Yediyurappa) ಅವರಿಂದ ಅಭಿಪ್ರಾಯ ಸಂಗ್ರಹಿಸಿದೆ.
ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಸಭೆ ನಡೆದ ಬಳಿಕ ಮಾತನಾಡಿದ ಯಡಿಯೂರಪ್ಪ, ಸೋಮವಾರ ಕೇಂದ್ರದ ವೀಕ್ಷಕರಾಗಿ ವಿನೋದ್ ತಾವ್ಡೆ ಮತ್ತು ಮನ್ಸುಖ್ ಮಂಡವಿಯಾ ಇಬ್ಬರು ಬರುತ್ತಿದ್ದಾರೆ. ಅವರು ರಾಜ್ಯ ಬಿಜೆಪಿ ಶಾಸಕರಿಂದ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ ಆಯ್ಕೆಯ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಉದ್ಧವ್ 1 ನಿರ್ಧಾರದಿಂದ ಮಹಾರಾಷ್ಟ್ರದಲ್ಲಿ ಬಂತು ಟ್ರಿಪಲ್ ಎಂಜಿನ್ ಸರ್ಕಾರ – ವಿಪಕ್ಷ ನಾಯಕ ಈಗ ಡಿಸಿಎಂ!
ವೀಕ್ಷಕರು ಕೇಂದ್ರ ನಾಯಕರಿಗೆ ವರದಿ ನೀಡಿದ ಬಳಿಕ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕ ಮಾಡಲಾಗುತ್ತದೆ. ನಾಳೆ ಅಧಿವೇಶನಕ್ಕೆ ಮುನ್ನ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಇಲ್ಲ. ಸದ್ಯ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅಗತ್ಯ ಬಿದ್ದರೆ ಎರಡು ದಿನಗಳ ಬಳಿಕ ಮತ್ತೆ ಕರೆಯುತ್ತೇವೆ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]